Kannada NewsKarnataka NewsLatestPolitics

*ವಿದೇಶದಿಂದ ವಾಪಸ್ ಆಗುತ್ತಿದ್ದಂತೆ ಸರ್ಕಾರದ ವಿರುದ್ಧ ಮತ್ತೆ ಗುಡುಗಿದ ಮಾಜಿ ಸಿಎಂ HDK*

ನಮ್ಮ ಬಗ್ಗೆ ಇವರಿಗೆ ಎಷ್ಟು ಭಯವಿದೆ ಎಂದು ಟಾಂಗ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿದೇಶ ಪ್ರವಾಸ ಮುಗಿಸಿ ಬೆಂಗಳೂರಿಗೆ ವಾಪಸ್ ಆಗಿದ್ದು, ವಿಮಾನದಿಂದ ಇಳಿಯುತ್ತಿದ್ದಂತೆಯೇ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ.

Related Articles

ವಿದೇಶ ಪ್ರವಾಸ ಮುಗಿಸಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮಾಜಿ ಸಿಎಂ ಕುಮಾರಸ್ವಾಮಿ, ಗೃಹ ಇಲಾಖೆಯಿಂದ ಹಿಡಿದು ಎಲ್ಲಾ ಇಲಾಖೆಗಳಲ್ಲಿಯೂ ವರ್ಗಾವಣೆ ದಂಧೆ ನಡೆದಿದೆ. ನಾನು ವಿದೇಶ ಪ್ರವಾಸದಲ್ಲಿದ್ದಾಗಲೂ ರಾಜ್ಯದಲ್ಲಿ ಏನು ನಡೆಯುತ್ತಿದೆ ಎಂಬ ಬಗ್ಗೆ ಮಾಹಿತಿ ಇದೆ ಎಂದರು.

ಸರ್ಕಾರವನ್ನು ಕೆಡವಲು ನಾನು ವಿದೇಶ ಪ್ರವಾಸಕ್ಕೆ ಹೋಗಿದ್ದೇನೆ ಎಂಬ ರೀತಿ ಬಿಂಬಿಸಿದ್ದಾರೆ. ನಾವು ಕುಟುಂಬ ಸಮೇತವಾಗಿ ವಿದೇಶ ಪ್ರವಾಸಕ್ಕೆ ಹೋಗಿದ್ದು ಹೊರತು ರಾಜಕಾರಣಕ್ಕೆ ಹೋಗಿಲ್ಲ. ಇದರಿಂದಲೇ ಗೊತ್ತಾಗುತ್ತದೆ. 19 ಸ್ಥಾನ ಗೆದ್ದ ನಮ್ಮ ಬಗ್ಗೆ ಇವರಿಗೆ ಎಷ್ಟು ಭಯವಿದೆ ಎಂಬುದು ಎಂದರು.

Home add -Advt

ಸಿಂಗಾಪುರದಲ್ಲಿ ಕುಳಿತು ಷಡ್ಯಂತ್ರ ಅಂತಾ ಯಾಕೆ ಹೆಳಿದ್ದಾರೆ ಗೊತ್ತಿಲ್ಲ. ಅವರು ನಮಗಿಂತ ಹೆಚ್ಚಾಗಿ ಶಾಸ್ತ್ರ ಕೇಳ್ತಾರೆ. ಜ್ಯೋತಿಷ್ಯವನ್ನು ಬಹಳ ನಂಬಿರೋರು. ಬಹಳ ರೀತಿ ಕುತಂತ್ರಗಳನ್ನು ಮಾಡ್ತಾರೆ. ಎಲ್ಲಾ ಕೃತಕವಾದ ಶಕ್ತಿ, ಮಂತ್ರದಿಂದ ಶಕ್ತಿ ತುಂಬಿಕೊಂಡು ಚುನಾವಣೆ ಗೆದ್ದಿದ್ದಾರೆ. ಕೃತಕ ಶಕ್ತಿ ಬಹಳ ದಿನ ಇರಲ್ಲ ಎಂಬುದೂ ಅವರ ತಲೆಯಲ್ಲಿ ಇರಬಹುದು. ಹಗಾಗಿ ಈ ರೀತಿ ಹೇಳಿರಬಹುದು ಎಂದು ವ್ಯಂಗ್ಯವಾಡಿದ್ದಾರೆ.


Related Articles

Back to top button