Kannada NewsKarnataka NewsLatestPolitics

*HDK ಆರೋಪಕ್ಕೆ ಟಾಂಗ್ ನೀಡಿದ ಡಿಸಿಎಂ ಡಿ.ಕೆ.ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸರ್ಕಾರದ ವಿರುದ್ಧ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮಾಡಿರುವ ವರ್ಗಾವಣೆ ದಂಧೆ ಆರೋಪಕ್ಕೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಹೆಚ್.ಡಿ.ಕುಮಾರಸ್ವಾಮಿ ಅವರ ಸಮಾಧಾನಕ್ಕೆ ಏನಾದರೂ ಮಾತನಾಡಲಿ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಅವರು ಅವರ ಸಮಾಧಾನಕ್ಕೆ ಏನಾದರೂ ಮಾತನಾಡಲಿ, ಪಾಪ ಹೆಚ್.ಡಿ.ಕೆ. ವಿಶ್ರಾಂತಿ ತೆಗೆದುಕೊಂಡು ಬಂದಿದ್ದಾರೆ ಎಂದರು.

Home add -Advt

ಮಾಟ, ಮಂತ್ರ ಕೃತಕ ಶಕ್ತಿಯಿಂದ ಶಕ್ತಿ ತುಂಬಿಕೊಂಡು ಚುನಾವಣೆಯಲ್ಲಿ ಗೆದ್ದಿದ್ದಾರೆ ಎಂಬ ಕುಮಾರಸ್ವಾಮಿ ಆರೋಪಕ್ಕೆ, ಮಂತ್ರನೋ, ತಂತ್ರನೋ, ಶಕ್ತಿನೋ ಏನಾದ್ರೂ ಹೇಳಲಿ, ಎಲ್ಲಿ ಶ್ರಮವಿದೆ ಅಲ್ಲಿ ಶಕ್ತಿ, ಭಕ್ತಿ ಇರುತ್ತದೆ. ಶ್ರದ್ಧೆಯಿಂದ ಕೆಲಸ ಮಾಡಿದಾಗ ಫಲ ಸಿಗುತ್ತದೆ. ಕಳೆದ ಮೂರು ವರ್ಷಗಳಿಂದ ನಾನೂ ನಿದ್ರಿಸಿಲ್ಲ, ಕಾರ್ಯಕರ್ತರಿಗೂ ನಿದ್ದೆಮಾಡಲು ಬಿಟ್ಟಿಲ್ಲ. ರಾಜ್ಯದ ಜನರು ನಮ್ಮ ಮೇಲೆ ನಂಬಿಕೆ ಇಟ್ಟು ಗೆಲುವು ನೀಡಿದ್ದಾರೆ. ನಮ್ಮ ಶ್ರಮದ ಬಗ್ಗೆ ನಮಗೆ ಗೊತ್ತಿದೆ. ಕುಮಾರಣ್ಣ ಏನೋ ಹೇಳುತ್ತಾರೆ ಅಣ್ಣ ಹೇಳಿದ್ದನ್ನು ತಮ್ಮ ಕೇಳಬೇಕು ಎಂದು ಟಾಂಗ್ ನೀಡಿದರು.


Related Articles

Back to top button