Uncategorized

*ಪೆನ್ ಡ್ರೈವ್ ರಿಲೀಸ್ ಆದ್ರೆ ಸಂಬಂಧಪಟ್ಟ ಮಂತ್ರಿ ರಾಜೀನಾಮೆ ಕೊಡಬೇಕಾಗುತ್ತೆ; ಮತ್ತೆ ಗುಡುಗಿದ ಕುಮಾರಸ್ವಾಮಿ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವರ್ಗಾವಣೆ ದಂಧೆ ವಿಚಾರವಾಗಿ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಪೆನ್ ಡ್ರೈವ್ ಹೊರಗೆ ಬಂದ್ರೆ ಸಂಬಂಧಪಟ್ಟ ಮಂತ್ರಿ ರಾಜೀನಾಮೆ ನೀದಬೇಕಾಗುತ್ತದೆ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ವರ್ಗಾವಣೆ ದಂಧೆ ಸಿಎಂ ಮೂಗಿನ ನೇರಕ್ಕೆ ನಡೆಯುತ್ತಿದೆ. ಎಲ್ಲಾ ಹುದ್ದೆಗಳೂ ಹಣದಿಂದಲೇ ವರ್ಗಾವಣೆಯಾಗುತ್ತಿದೆ. ಸಿಎಂ ಮೂಲಕವೇ ವರ್ಗಾವಣೆ ಆದೇಶಗಳಾಗುತ್ತಿವೆ ಎಂದು ಆರೋಪಿಸಿದರು.

ಯಾವುದೇ ಹೊಸ ಸರ್ಕಾರ ಬಂದಾಗ ವರ್ಗಾವಣೆ ಆಗುವುದು ಸರ್ವೇ ಸಾಮಾನ್ಯ. ಆದರೆ ಇವರು ಯಾವ ಮಾನದಂಡಗಳ ಮೇಲೆ ವರ್ಗಾವಣೆಗಳನ್ನು ಮಾಡುತ್ತಿದ್ದಾರೆ ಎಂಬುದು ಇವರಿಗೆ ಗೊತ್ತಿಲ್ಲವೇ? ಸಿಎಂ ಗೃಹಕಚೇರಿಯಲ್ಲಿಯೇ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಇವರಿಗೆ ತಿಳಿದಿಲ್ಲವೇ? ಕೆಲವರು ನನ್ನನ್ನು ಹಿಟ್ ಆಂಡ್ ರನ್ ಅಂತಾರೆ ಏನಾದರೂ ಹೇಳಿಕೊಳ್ಳಲಿ. ಸಮಯಕ್ಕೆಸರಿಯಾಗಿ ದಾಖಲೆ ಬಿಡುಗಡೆ ಮಾಡ್ತೀನಿ. ಆಗ ಪೆನ್ ಡ್ರೈವ್ ರಹಸ್ಯ ಹೊರಬರಲಿದೆ. ಸಂಬಂಧಪಟ್ಟ ಸಚಿವರು ರಾಜೀನಾಕೊಡಬೇಕಾಗುತ್ತದೆ ಎಂದಿದ್ದಾರೆ.

Home add -Advt

Related Articles

Back to top button