Latest

*ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದ ಮಾಜಿ ಸಿಎಂ ಕುಮಾರಸ್ವಾಮಿ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಬ್ರಾಹ್ಮಣ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ಬೇಷರತ್ತಾಗಿ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಶಾಸಕ ರವಿ ಸುಬ್ರಹ್ಮಣ್ಯ ಆಗ್ರಹಿಸಿದ್ದಾರೆ. ನಾನು ಕ್ಷಮೆಯಾಚಿಸುವಂತಹ ತಪ್ಪು ಮಾಡಿಲ್ಲ ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಪ್ರಹ್ಲಾದ್ ಜೋಶಿ ಸಿಎಂ ಮಾಡಲು ಆರ್ ಎಸ್ ಎಸ್ ಹುನ್ನಾರ ನಡೆಸಿದೆ. ಜೋಶಿ ಕರ್ನಾಟಕ ಮೂಲದ ಬ್ರಾಹ್ಮಣರಲ್ಲ, ಮಹಾರಾಷ್ಟ್ರ ಪೇಶ್ವೆ ವಂಶಸ್ಥರು. ಶೃಂಗೇರಿ ಮಠ ಒಡೆದ, ಶಂಕಾರಾಚಾರ್ಯರ ಮನೆತನದವರು ಓಡಿಸಿದ ವಂಶಕ್ಕೆ ಸೇರಿದವರು ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದು, ಕುಮಾರಸ್ವಾಮಿ ತಮ್ಮ ಹೇಳಿಕೆಗೆ ಕ್ಷಮೆ ಕೇಳಬೇಕು ಎಂದು ಶಾಸಕ ರವಿ ಸುಬ್ರಹ್ಮಣ್ಯ ಒತ್ತಾಯಿಸಿದ್ದಾರೆ.

ಎಲ್ಲಾ ಸಮುದಾಯದ ಬೆಂಬಲದಿಂದ ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿದ್ದರು. ಬಿಜೆಪಿ ಬಗ್ಗೆ ಗೊಂದಲ ಸೃಷ್ಟಿಸುವಂತಹ ಹೇಳಿಕೆಯನ್ನು ಕುಮಾರಸ್ವಾಮಿ ನೀಡಿತ್ತಿದ್ದಾರೆ. ಹೆಚ್ ಡಿ ಕೆ ಹೇಳಿಕೆ ಬ್ರಾಹ್ಮಣ ಸಮುದಾಯಕ್ಕೆ ನೋವುಂಟುಮಾಡಿದೆ. ಕುಮಾರಸ್ವಾಮಿ ಮೊದಲು ಕ್ಷಮೆಯಾಚಿಸಲಿ ಎಂದಿದ್ದಾರೆ.

ರವಿಸುಬ್ರಹ್ಮಣ್ಯ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಹೆಚ್. ಡಿ.ಕುಮಾರಸ್ವಾಮಿ, ನಾನು ಬ್ರಾಹ್ಮಣರಿಗೆ ಅವಮಾನ ಮಾಡುವಂತಹ ಹೇಳಿಕೆ ನೀಡಿಲ್ಲ, ಕ್ಷಮೆ ಕೇಳುವಂತಹ ತಪ್ಪು ಮಾಡಿಲ್ಲ ಎಂದು ಹೇಳಿದ್ದಾರೆ.

ನಾನು ಯಾವುದೇ ಸಮುದಾಯಕ್ಕೆ ಅಗೌರವ ತೋರಿಲ್ಲ, ಹಾಗಾಗಿ ಯಾರ ಕ್ಷಮೆಯನ್ನೂ ಕೇಳುವ ಪ್ರಶ್ನೆಯೇ ಇಲ್ಲ. ನಮ್ಮ ರಾಜ್ಯದ ಸೌಹಾರ್ದ ಪರಂಪರೆಗೆ ಬಿಜೆಪಿಯಿಂದ ಧಕ್ಕೆಯಾಗುತ್ತಿದೆ. ಮತಚಲಾಯಿಸುವ ಮೊದಲು ಆರ್ ಎಸ್ ಎಸ್ ಹುನ್ನಾರಕ್ಕೆ ಮರುಳಾಗಬೇಡಿ ಎಂದು ಜನರಿಗೆ ಎಚ್ಚರಿಸಿದ್ದೇನೆ. ಶಿವಾಜಿಯನ್ನು ಕೊಂದವರು, ಶೃಂಗೇರಿ ಮಠವನ್ನು ಒಡೆದವರ ಕೈಗೆ ಕರ್ನಾಟಕ ಸಿಗಬಾರದು ಹಾಗಾಗಿ ಎಚ್ಚರವಹಿಸಿ ಎಂದಿದ್ದೇನೆ ಎಂದು ಹೇಳಿದರು.

*BJPಯಲ್ಲಿ 8 ಜನ ಡಿಸಿಎಂ…ಆ ಎಂಟು ಜನ ಯಾರೆಂಬುದೂ ಗೊತ್ತಿದೆ; ಹೊಸ ಚರ್ಚೆ ಮುಂದಿಟ್ಟ ಮಾಜಿ ಸಿಎಂ*

https://pragati.taskdun.com/h-d-kumaraswamyclarificationbrahmana-cmprahlada-joshi8-dcm/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button