Latest

*ಸಿಎಂ ತವರು ಕ್ಷೇತ್ರದಲ್ಲೇ ಶಾಲಾ ಮಕ್ಕಳ ಪ್ರತಿಭಟನೆ; ರಸ್ತೆಯಲ್ಲೇ ಕುಳಿತು ಧರಣಿ*

ಪ್ರಗತಿವಾಹಿನಿ ಸುದ್ದಿ; ಹಾವೇರಿ: ಸಿಎಂ ಬಸವರಾಜ್ ಬೊಮ್ಮಾಯಿ ಅವರ ತವರು ಕ್ಷೇತ್ರ ಹಾವೇರಿಯಲ್ಲಿ ಶಾಲಾ ಮಕ್ಕಳು ಪ್ರತಿಭಟನೆ ನಡೆಸಿದ್ದು, ಶಾಲೆಗೆ ಹೋಗಲು ದಾರಿ ಬಿಡಿ ಎಂದು ರಸ್ತೆಯಲ್ಲಿಯೇ ಕುಳಿತು ಧರಣಿ ನಡೆಸಿದ್ದಾರೆ.

ಕಲಾಂದರ ಛಬ್ಬಿ ಎಂಬುವವರು ಶಾಲೆಗೆ ಹೋಗುವ ದಾರಿಯನ್ನು ಒತ್ತುವರಿ ಮಾಡಿಕೊಂಡು ಇಟ್ಟಿಗೆಗಳನ್ನು ಇಟ್ಟು ದಾರಿ ಬಂದ್ ಮಾಡಿದ್ದು, ವಿದ್ಯಾರ್ಥಿಗಳು ಶಾಲೆಗೆ ಹೋಗಲು ದಾರಿಯಿಲ್ಲದಂತಾಗಿದೆ. ಇದರಿಂದ ಬೇಸತ್ತ ವಿದ್ಯಾರ್ಥಿಗಳು ಇಂದು ಸ್ಥಳದಲ್ಲಿ ಪ್ರತಿಭಟನೆ ನಡೆಸಿದ್ದು, ಶಾಲೆಗೆ ಹೋಗಲು ದಾರಿ ಮಾಡಿಕೊಡುವಂತೆ ಆಗ್ರಹಿಸಿದ್ದಾರೆ. ಸ್ಥಳಕ್ಕೆ ತಹಶ್ಲೀಲ್ದಾರ್ ಹಾಗೂ ಶಿಕ್ಷಣಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Home add -Advt

ಸರ್ಕಾರಿ ಮಾದರಿ ಗಂಡುಮಕ್ಕಳ ಶಾಲೆ ಹಾಗೂ ಸರ್ಕಾರಿ ಮಾದರಿ ಹೆಣ್ಣುಮಕ್ಕಳ ಶಾಲೆ ಎರಡು ಪ್ರತ್ಯೇಕ ಶಾಲೆಗಳಿಗೆ ತೆರಳಲು ಒಂದೇ ರಸ್ತೆಯನ್ನು ನಿರ್ಮಿಸಲಾಗಿತ್ತು. ಆದರೆ ಈಗ ಆ ರಸ್ತೆಯನ್ನು ಒತ್ತುವರಿ ಮಾಡಿಕೊಂಡು ರಸ್ತೆಯನ್ನೇ ಬಂದ್ ಮಾಡಲಾಗಿದೆ. ಇದರಿಂದ ನೂರಾರು ವಿದ್ಯಾರ್ಥಿಗಳು ಇಂದು ರಸ್ತೆಯಲ್ಲಿಯೇ ಕುಳಿತು ಪ್ರತಿಭಟನೆ ನಡೆಸಿದ್ದಾರೆ.

*BJPಯಲ್ಲಿ 8 ಜನ ಡಿಸಿಎಂ…ಆ ಎಂಟು ಜನ ಯಾರೆಂಬುದೂ ಗೊತ್ತಿದೆ; ಹೊಸ ಚರ್ಚೆ ಮುಂದಿಟ್ಟ ಮಾಜಿ ಸಿಎಂ*

https://pragati.taskdun.com/h-d-kumaraswamyclarificationbrahmana-cmprahlada-joshi8-dcm/

 

Related Articles

Back to top button