ಪ್ರಗತಿವಾಹಿನಿ ಸುದ್ದಿ: ಕಿಡ್ನ್ಯಾಪ್ ಕೇಸ್ ನಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣರನ್ನು ಬಂಧಿಸಲಾಗಿದೆ. ಹೆಣ್ಣುಮಗಳನ್ನು ಪತ್ತೆ ಮಾಡಲಾಗಿದ್ದರೂ ಇನ್ನೂ ಯಾಕೆ ಕೋರ್ಟ್ ಗೆ ಹಾಜರುಪಡಿಸಿಲ್ಲ? ಎಂದು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಪ್ರಜ್ವಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 15 ದಿನಗಳಿಂದ ಎಸ್ಐಟಿ ತನಿಖೆಯ ಸಾಧನೆಯೇನು? ಇವರು ಏನು ಮಾಡಲು ಹೊರಟಿದ್ದಾರೆ? ಎಸ್ ಐಟಿಯಿಂದ ಸೂಕ್ತ ತನಿಖೆ ಅನುಮಾನ. ಸರ್ಕಾರಕ್ಕೆ ನ್ಯಾಯ ಕೊಡಿಸುವುದು ಬೇಕಿಲ್ಲ. ಕೇವಲ ಪ್ರಚಾರಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಕಿಡ್ನ್ಯಾಪ್ ಕೇಸ್ ನಲ್ಲಿ ರೇವಣ್ಣರನ್ನು ಬಂಧಿಸಲಾಗಿದೆ. ಆ ಹೆಣ್ಣುಮಗಳನ್ನು ಪತ್ತೆ ಮಾಡಿ ಕರೆತಂದು 5 ದಿನಗಳು ಕಳೆದಿವೆ. ಆದರೂ ಈವರೆಗೂ ಯಾಕೆ ಎಸ್ಐಟಿ ಅಧಿಕಾರಿಗಳು ನ್ಯಾಯಾಲಯದ ಮುಂದೆ ಆಕೆಯನ್ನು ಹಾಜರುಪಡಿಸಿಲ್ಲ? ಆ ಹೆಣ್ಣುಮಗಳ ಹೇಳಿಕೆಯನ್ನು ಈವರೆಗೆ ಯಾಕೆ ದಾಖಲಿಸಿಲ್ಲ? ಎಂದು ಕೇಳಿದ್ದಾರೆ.
ಸರ್ಕಾರಕ್ಕೆ ಪ್ರಕರಣದ ಸತ್ಯಾಂಶ ಹೊರಬರುವುದು ಬೇಕಿಲ್ಲ. ರೇವಣ್ಣರನ್ನು ಇನ್ನೂ ಕೆಲದಿನಗಳ ಕಾಲ ಜೈಲಿನಲ್ಲಿಯೇ ಕೂಡಿಡಬೇಕು ಎಂಬುದು ಇವರ ಉದ್ದೇಶ ಎಂದು ವಾಗ್ದಾಳಿ ನಡೆಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ