ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರಿ ಸದ್ದು ಮಾಡುತ್ತಿರುವ ಸ್ಯಾಂಟ್ರೋ ರವಿ ಹಾಗೂ ಬಿಜೆಪಿ ನಾಯಕರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ಮಧ್ಯೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.
ಗೃಹ ಸಚಿವ ಅರಗ ಜ್ಞಾನೇಂದ್ರ ಮನೆಯಲ್ಲಿ ಸ್ಯಾಂಟ್ರೋ ರವಿ ಕಂತೆ ಕಂತೆ ಹಣದ ಲೆಕ್ಕ ಹಾಕುತ್ತಿರುವ ಫೋಟೋ ವೈರಲ್ ಆಗಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆರೋಪಿಸಿದ್ದಾರೆ.
ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಮಾತನಡಿದ ಕುಮಾರಸ್ವಾಮಿ, ಗೃಹ ಸಚಿವ ಅರಗ ಜ್ಞಾನೇಂದ್ರ ನಿವಾಸದಲ್ಲಿ ಹಣದ ಲೆಕ್ಕ ಹಾಕಿರಿವ ಫೋಟೋ ವೈರಲ್ ಆಗಿದೆ. ಗೃಹ ಸಚಿವ ಅರಗ ಮನೆಯಲಿ ಸ್ಯಾಂಟ್ರೋ ರವಿ ಲೆಕ್ಕ ಹಾಕಿದ ಹಣದ ಫೋಟೋ ತೆಗೆದವರು ಯಾರು? ಎಸಿಪಿ ವರ್ಗಾವಣೆ ಮಾಡಲು 15 ಲಕ್ಷ ಹಣ ಎಣಿಸುತ್ತಿರುವುದಂತೆ. ಇದು ರಾಜ್ಯದ ಗೃಹ ಸಚಿವರ ನಿವಾಸದಲ್ಲಿಯೇ ನಡೆದಿದೆ. ಈ ಬಗ್ಗೆ ಮೊದಲು ತನಿಖೆಯಾಗಲಿ ಎಂದು ಆಗ್ರಹಿಸಿದರು.
ಸಚಿವ ಸೋಮಶೇಖರ್ ಜತೆ ಸ್ಯಾಂಟ್ರೋ ರವಿ ಸಂಭಾಷಣೆ ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ, ವರ್ಗಾವಣೆ ಬಗ್ಗೆ ಚರ್ಚಿಸಿರುವ ಆಡಿಯೋ ವೈರಲ್ ಆಗಿದೆ. ಆಡಿಯೋ ನಾನು ಮಾಡಿಸಿದ್ದಾ? ಇಂತಹ ವಿಷಯ ಇಟ್ಟುಕೊಂಡು ರಾಜಕೀಯ ಮಾಡುವ ಕರ್ಮ ನನಗೆ ಇಲ್ಲ. ಸಿಎಂ ದಲ್ಲಾಳಿಗಳೇ ಆಡಳಿತ ನಡೆಸುವ ಸ್ಥಿತಿ ಸೃಷ್ಠಿಸಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಕುಮಾರಕೃಪಾ ಹೊಸ ಕಟಡದಲ್ಲಿ ಏನೆಲ್ಲಾ ನಡೆಯಿತು? ಉಸ್ತುವಾರಿ ದೇವರಾಜ್ ನನ್ನು ಯಾಕೆ ಎತ್ತಂಗಡಿ ಮಾಡಿದರು? ಸಿಎಂ ಹೆಚ್ಚುವರಿ ಕಾರ್ಯದರ್ಶಿ ಜಗದೀಶ್ ಎತ್ತಂಗಡಿ ಯಾಕೆ ಮಾಡಿದರು? ಬೆಂಕಿ ಇಲ್ಲದೇ ಹೊಗೆ ಬರುತ್ತಾ? ಮುಖ್ಯಮಂತ್ರಿಗಳ ಮನೆಯ ಕೂಗಳತೆ ದೂರದಲ್ಲಿ ಇದೆಲ್ಲಾ ಅಸಹ್ಯಗಳು ನಡೆದಿದೆ ಎಂದು ಸಿಎಂ ಬೊಮ್ಮಾಯಿ ವಿರುದ್ಧವೂ ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.
*ಅಭಿಪ್ರಾಯ ಬೇಧವಿರಬಹುದು ಆದರೆ ಹಿಂಸೆಯನ್ನು ಒಪ್ಪಲು ಸಾಧ್ಯವಿಲ್ಲ; ಸಿಎಂ ಬೊಮ್ಮಾಯಿ ಆಕ್ರೋಶ*
https://pragati.taskdun.com/belagavi-shreeramasena-presidentravifiring-casecm-basavaraj-bommai-reaction/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ