Latest

*ಹೃದಯಾಘಾತ: 6ನೇ ತರಗತಿ ವಿದ್ಯಾರ್ಥಿ ದುರ್ಮರಣ*

ಪ್ರಗತಿವಾಹಿನಿ ಸುದ್ದಿ; ಮಡಿಕೇರಿ: ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿಯೂ ಹೃದಯಾಘಾತ ಸಮಸ್ಯೆ ಕಂಡುಬರುತ್ತಿದ್ದು, 6ನೇ ತರಗತಿ ವಿದ್ಯಾರ್ಥಿಯೋರ್ವ ಹೃದಯಾಘಾತದಿಂದ ಸಾವನ್ನಪ್ಪಿರುವ ದಾರುಣ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೂಡುಮಂಗಳೂರು ಗ್ರಾಮದಲ್ಲಿ ನಡೆದಿದೆ.

12 ವರ್ಷದ ವಿದ್ಯಾರ್ಥಿ ಕೀರ್ತನ್ ಮೃತ ಬಾಲಕ. ಕೀರ್ತನ್, ಕೂಡುಮಂಗಳೂರು ಗ್ರಾಮದ ಚಾಲಕ ಮಂಜಾಚಾರಿ ಎಂಬುವವರ ಪುತ್ರ. ಕೊಪ್ಪದ ಭಾರತ ಮಾತಾ ಶಾಲಾ ವಿದ್ಯಾರ್ಥಿಯಾಗಿದ್ದ.

ರಾತ್ರಿ ನಿದ್ರಿಸುತ್ತಿದ್ದ ಕೀರ್ತನ್ ಏಕಾಏಕಿ ಎರಡು ಬಾರಿ ಕಿರುಚಿಕೊಂಡಿದ್ದಾನೆ. ತಕ್ಷಣ ಪೋಷಕರು ಕುಶಾಲನಗರ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಷ್ಟರಲ್ಲೇ ಬಾಲಕ ಕೊನೆಯುಸಿರೆಳೆದಿದ್ದ. ಕೀರ್ತನ್ ಓದುತ್ತಿದ್ದ ಶಾಲೆಯಲ್ಲಿಯೇ ತಂದೆ ಬಸ್ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮಗನನ್ನು ಕಳೆದುಕೊಂಡಿರುವ ಕುಟುಂಬಕ್ಕೆ ದಿಕ್ಕೇ ತೋಚದಂತಾಗಿದೆ.

*ಅಭಿಪ್ರಾಯ ಬೇಧವಿರಬಹುದು ಆದರೆ ಹಿಂಸೆಯನ್ನು ಒಪ್ಪಲು ಸಾಧ್ಯವಿಲ್ಲ; ಸಿಎಂ ಬೊಮ್ಮಾಯಿ ಆಕ್ರೋಶ*

https://pragati.taskdun.com/belagavi-shreeramasena-presidentravifiring-casecm-basavaraj-bommai-reaction/

Related Articles

Back to top button