Latest

*ಅಭಿಪ್ರಾಯ ಬೇಧವಿರಬಹುದು ಆದರೆ ಹಿಂಸೆಯನ್ನು ಒಪ್ಪಲು ಸಾಧ್ಯವಿಲ್ಲ; ಸಿಎಂ ಬೊಮ್ಮಾಯಿ ಆಕ್ರೋಶ*

ಪ್ರಗತಿವಾಹಿನಿ ಸುದ್ದಿ; ಹಾವೇರಿ: ಬೆಳಗಾವಿಯಲ್ಲಿ ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ರವಿ ಮೇಲೆ ಗುಂಡಿನ ದಾಳಿ ಪ್ರಕರಣವನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತೀವ್ರವಾಗಿ ಖಂಡಿಸಿದ್ದಾರೆ.

ಹಾವೇರಿಯಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ನಮ್ಮಲ್ಲಿ ಅಭಿಪ್ರಾಯ ಬೇಧವಿರಬಹುದು. ಆದರೆ ಹಿಂಸೆ ಒಪ್ಪುವುದಿಲ್ಲ. ಈ ಘಟನೆ ಅತ್ಯಂತ ಖಂಡನೀಯ ಎಂದರು.

Home add -Advt

ತಕ್ಷಣ ಎಲ್ಲಾ ಆರೋಪಿಗಳನ್ನು ಬಂಧಿಸುವಂತೆ ಸೂಚನೆ ನೀಡಿದ್ದೇನೆ. ಯಾರನ್ನೇ ಆದರೂ ಕೊಲ್ಲುವ ಕೆಲಸಕ್ಕೆ ಮುಂದಾಗಬಾರದು. ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ತಿಳಿಸಿದ್ದಾರೆ.

ಇನ್ನು ಶ್ರೀರಾಮಸೇನೆಯ ಅಧ್ಯಕ್ಷ ರವಿ, ಚಾಲಕನ ಆರೋಗ್ಯದ ಬಗ್ಗೆ ಕಾಳಜಿ ವಹಿಸಲಾಗುವುದು ಎಂದು ತಿಳಿಸಿದರು.

ರವಿ ಕೋಕಿತ್ಕರ್ ಮೇಲಿನ ಗುಂಡಿನ ದಾಳಿ: ಕೆಲವೇ ಗಂಟೆಗಳಲ್ಲಿ ಮೂವರ ಬಂಧನ

https://pragati.taskdun.com/ravi-kokitkar-shooting-three-arrested/

Related Articles

Back to top button