Karnataka NewsPolitics

*ಸಿಎಂ ಸಿದ್ದರಾಮಯ್ಯ ವಿರುದ್ಧ HDK ಮತ್ತೊಂದು ಗಂಭೀರ ಆರೋಪ*

ಪ್ರಗತಿವಾಹಿನಿ ಸುದ್ದಿ: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. ಸಿದ್ದರಾಮಯ್ಯ ಡಿಸಿಎಂ ಆಗಿದ್ದಾಗ ಒಂದು ಮನೆ ಕಟ್ಟಿದ್ದರು. ಯಾರ ಜಾಗದಲ್ಲಿ ನೀವು ಮನೆ ಕಟ್ಟಿದ್ದೀರಾ? ಆ ದಾಖಲೆ ಬೇಕಾ? ಎಂದು ಕೇಳುವ ಮೂಲಕ ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ದಲಿತ ಸಿಎ ಸೈಟ್ ಮುಡಾದಲ್ಲಿ ಅಲಾಟ್ ಆಗಿದ್ದ ಸೈಟ್ ನಲ್ಲಿ ಅಕ್ರಮವಾಗಿ ಮನೆ ಕಟ್ಟಿದ್ದಾರೆ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಅವರದ್ದು ಮೈಸೂರಿನಲ್ಲಿ ಮುಡಾ ಕೇಸ್ ಮಾತ್ರವಲ್ಲ ಸೀರಿಸ್ ಆಫ್ ಅಕ್ರಮವೇ ಇದೆ. ವಿಕಲಚೇತನ ವ್ಯಕ್ತಿ 24 ಸಾವಿರ ರೂಪಾಯಿ ನೀಡಿ ಸೈಟ್ ಪಡೆಯುತ್ತಾನೆ. ಸಾಕಮ್ಮ ಎಂಬುವವರ ಹೆಸರಿನಲ್ಲಿ ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಿ 10 ಸಾವಿರ ರೂ.ಸ್ಕೈಯರ್ ಫೀಟ್ ಜಾಗ ಅಕ್ರಮವಾಗಿ ಪಡೆಯುತ್ತಾರೆ. ಆಮೇಲೆ ಸೈಟ್ ತಗೊಂಡವರು ಯಾರೋ ಮನೆ ಕಟ್ಟಿದ್ದಾರೆ ಎಂದು ನೋಡುವುದಕ್ಕೆ ಬರ್ತಾರೆ. ಈ ಬಗ್ಗೆ ನನ್ನ ಬಳಿ ಈಗಲೂ ದಾಖಲೆಗಳಿವೆ ಎಂದಿದ್ದಾರೆ.

ನನ್ನ ಜೀವನ ತೆರೆದ ಪುಸ್ತಕ ಎಂದು ಸಿಎಂ ಸಿದ್ದರಾಮಯ್ಯ ಯಾವಾಗಲೂ ಹೇಳುತ್ತಿರುತ್ತಾರೆ. ಈ ದಾಖಲೆಗಳನ್ನು ತೆಗೆಯಿರಿ ಯಾರಿಗೆ ನೀವು ಸೇಲ್ ಮಾಡಿದ್ದೀರಿ? ಇನ್ನೂ ಯಾರ ಕೈಯಲ್ಲಿದೆ ಸೈಟ್, ಹೆಸರಿಗಷ್ಟೇ ಮಾರಾಟ ತೋರಿಸಿಕೊಂಡಿದ್ದಾರೆ. ಅದನ್ನು ತೆಗೆದರೆ ಮತ್ತೊಂದು ರಾಮಾಯಣ ಶುರುವಾಗುತ್ತೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

Home add -Advt

Related Articles

Back to top button