Latest

ನನ್ನ ಹಾಗೂ ಆದಿಚುಂಚನಗಿರಿ ಮಠಾಧೀಶರ ಫೋನ್ ಕದ್ದಾಲಿಕೆಯಾಗಿದೆ; ಹೊಸ ಬಾಂಬ್ ಸಿಡಿಸಿದ ಸುಮಲತಾ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಸ್ಯಾಂಡಲ್ ವುಡ್ ಸ್ಮಗ್ಲರ್ಸ್ ಟ್ಯಾಗ್ ಕೊಟ್ಟು ನನ್ನ ಫೋನ್ ಕದ್ದಾಲಿಕೆ ಮಾಡಿದ್ದಾರೆ ಎಂದು ಸುಮಲತಾ ಗಂಭೀರ ಆರೋಪ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲತಾ, ನನ್ನ ಫೋನ್ ಕದ್ದಾಲಿಕೆ ಮಾಡಿದ್ದಾರೆ. ಅಲ್ಲದೇ ಆದಿಚುಂಚನಗಿರಿ ಮಠಾಧೀಶರ ಫೋನ್ ಟ್ಯಾಪ್ ಮಾಡಿ ಕದ್ದಾಲಿಕೆ ಮಾಡಿದ್ದಾರೆ. ಕಾರಣ ಕೇಳಿದರೆ ಸ್ಯಾಂಡಲ್ ವುಡ್ ಸ್ಮಗ್ಲರ್ಸ್ ಎಂಬ ಟ್ಯಾಗ್ ಕೊಟ್ಟಿದ್ದಾರೆ. ದೇವರೆಂದು ಪೂಜಿಸುವ ಗುರುಗಳ ದೂರವಾಣಿಯನ್ನೇ ಕದ್ದಾಲಿಕೆ ಮಾಡುವ ಇವರಿಗೆ ಇನ್ನು ನನ್ನ ಫೋನ್ ಕದ್ದಾಲಿಸುವುದು ಯಾವ ಲೆಕ್ಕ? ಸ್ವಲ್ಪವಾದರೂ ಭಯ-ಭಕ್ತಿಯಾದರೂ ಬೇಡವೇ ಎಂದು ಗುಡುಗಿದ್ದಾರೆ.

ಈ ಬಗ್ಗೆ ಸಿಬಿಐ ಅಧಿಕಾರಿಗಳು ನನಗೆ ತೋರಿದ ದಾಖಲೆಗಳನ್ನು ನೋಡಿ ಶಾಕ್ ಆದೆ. ಹಲವರ ಫೋನ್ ಟ್ಯಾಪ್ ಮಾದಲಾಗಿದೆ ಎಂದು ಅಧಿಕಾರಿಗಳೇ ಲಿಸ್ಟ್ ತೋರಿಸಿದ್ದಾರೆ. ಯಾರ ಜೊತೆ ಮಾತನಾಡುವಾಗ ಫೋನ್ ಟ್ಯಾಪ್ ಮಾಡಲಾಯಿತು ಎಂಬುದು ಗೊತ್ತಾಗಿದೆ. ಸುಳ್ಳನ್ನೇ ಬಂಡವಾಳ ಮಾಡಿಕೊಂಡು, ಸಮರ್ಥನೆ ಮಾಡಿಕೊಳ್ಳುತ್ತಾ ಇವರಂತಹ ಹೊಲಸು ರಾಜಕಾರಣ ಮಾಡುವವರಿಗೆ ಇಷ್ಟು ಧೈರ್ಯ ಇರುವಾಗ ಇನ್ನು ನಾನು ಪ್ರಾಮಾಣಿಕವಾಗಿ ಕೆಲಸಗಳನ್ನು ಮಾಡುತ್ತ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವವರಿಗೆ ಧೈರ್ಯವಿಲ್ಲವೇ?

ಇನ್ನು ಶಾಸಕ ರವೀಂದ್ರ ಶ್ರೀಕಂಠಯ್ಯ ಕ್ರಿಮಿನಲ್ ಮೈಂಡ್ ವ್ಯಕ್ತಿ. ಮಂಡ್ಯದಲ್ಲಿ ಭ್ರಷ್ಟಾಚಾರದ ಕಾಂಟ್ರ್ಯಾಕ್ಟ್ ಪಡೆದುಕೊಂಡಿದ್ದಾರೆ. ಒಂದು ಅಪರಾಧ ಮಾಡುವುದು ಅದನ್ನು ಮುಚ್ಚಲು ಇನ್ನಷ್ಟು ಅಪರಾಧ ಮಾಡುವುದು ಹೀಗೆ ಅಪರಾಧಗಳ ಸರಮಾಲೆಯನ್ನೇ ಮುಂದುವರೆಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Home add -Advt

ಸುಮಲತಾ ಓರ್ವ ‘ನಟೋರಿಯಸ್’

Related Articles

Back to top button