Latest

ಸಿಎಂ ಹೇಳಿಕೆ ಬೆನ್ನಲ್ಲೇ ನಿರಾಣಿ, ಯತ್ನಾಳ್ ಹೆಸರು ಚರ್ಚೆಗೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಹೈಕಮಾಂಡ್ ಸೂಚಿಸಿದ ತಕ್ಷಣ ರಾಜೀನಾಮೆ ನೀಡುತ್ತೇನೆ ಎಂಬ ಸಿಎಂ ಯಡಿಯೂರಪ್ಪ ಹೇಳಿಕೆ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಎಂಎಲ್ ಸಿ ಹೆಚ್.ವಿಶ್ವನಾಥ್, ಪರ್ಯಾಯ ನಾಯಕತ್ವದ ಬಗ್ಗೆ ಕೆಲ ನಾಯಕರ ಹೆಸರು ಪ್ರಸ್ತಾಪಿಸಿದ್ದಾರೆ.

ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿರುವ ವಿಶ್ವನಾಥ್, ಯಡಿಯೂರಪ್ಪನವರ ಹೇಳಿಕೆಯಲ್ಲಿ ಗೊಂದಲವಿಲ್ಲ, ಸ್ಪಷ್ಟತೆಯಿದೆ. ಎಲ್ಲಿವರೆಗೂ ಹೈಕಮಾಂಡ್ ಅಧಿಕಾರದಲ್ಲಿರಲು ಹೋಳುತ್ತೋ ಅಲ್ಲಿಯವರೆಗೂ ಅಧಿಕಾರದಲ್ಲಿ ಮುಂದುವರೆಯುತ್ತೇನೆ. ಹೈಕಮಾಂಡ್ ಸೂಚಿಸಿದರೆ ರಾಜೀನಾಮೆ ನಿಡುತ್ತೇನೆ ಎಂದಿದ್ದಾರೆ. ಅವರಲ್ಲಿ ಯವುದೇ ಗೊಂದಲಗಳಿಲ್ಲ. ಇನ್ನು ರಾಜ್ಯದಲ್ಲಿ ಪರ್ಯಾಯ ನಾಯಕತ್ವದ ಬಗ್ಗೆ ಮಾತನಾಡಬೇಕೆಂದರೆ ಬಹಷ್ಟು ಜನರಿದ್ದಾರೆ ಎಂದರು.

ರಾಜ್ಯಕ್ಕೆ ಮತ್ತೋರ್ವ ನಾಯಕರು ಬರುವುದಾದರೆ ವೀರಶೈವ ಸಮುದಾಯದವರೇ ಬರಲಿ. ವೀರಶೈವರಲ್ಲಿ ಪಂಚಮಸಾಲಿಗಳು ಸಮರ್ಥ ಹಾಗೂ ಮುಂಚೂಣಿ ನಾಯಕರಿದ್ದಾರೆ. ಮುರುಗೇಶ್ ನಿರಾಣಿ, ಬಸನಗೌಡ ಪಾಟೀಲ್ ಯತ್ನಾಳ್ ಇವರು ಸಮರ್ಥರು. ನಾಯಕತ್ವ ಬದಲಾವಣೆ ಮಾಡಬೇಕೆಂದರೆ ಯಡಿಯೂರಪ್ಪನವರಂತೆಯೇ ಸಮರ್ಥ ವೀರಶೈವ ನಾಯಕರ ಅಗತ್ಯವಿದೆ ಎಂದು ಹೇಳಿದರು.
ನಾನೇನೇ ಮಾತನಾಡಿದರೂ ಬೆಂಕಿಹೊತ್ತಿಕೊಳ್ಳುತ್ತೆ ಎಂದ ಸಿಪಿವೈ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button