Latest

ನಾನೇನೇ ಮಾತನಾಡಿದರೂ ಬೆಂಕಿಹೊತ್ತಿಕೊಳ್ಳುತ್ತೆ ಎಂದ ಸಿಪಿವೈ

ಪ್ರಗತಿವಾಹಿನಿ ಸುದ್ದಿ; ರಾಮನಗರ: ಹೈಕಮಾಂಡ್ ಸೂಚಿಸಿದರೆ ರಾಜೀನಾಮೆ ಎಂಬ ಸಿಎಂ ಯಡಿಯೂರಪ್ಪ ಹೇಳಿಕೆ ಬೆನ್ನಲ್ಲೇ ಮಾತನಾಡಿರುವ ಸಚಿವ ಸಿ.ಪಿ.ಯೋಗೇಶ್ವರ್, ನಾನು ಸಿಎಂ ಬಗ್ಗೆ ಏನೇ ಮಾತನಾಡಿದರೂ ಬೆಂಕಿ ಹೊತ್ತಿಕೊಳ್ಳುತ್ತೆ. ಕಳೆದ ಒಂದು ವಾರದಿಂದ ಇದೇ ರೀತಿ ನಡೆಯುತ್ತಿದೆ ಎಂದರು.

ರಾಮನಗರದಲ್ಲಿ ಮಾತನಾಡಿದ ಯೋಗೇಶ್ವರ್, ಸಿಎಂ ಯಡಿಯೂರಪ್ಪ ಏನು ಹೇಳಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ನನೌ ರಾಜಕೀಯವಾಗಿ ಯಾವುದೇ ಪ್ರತಿಕ್ರಿಯೆ ನೀಡಲ್ಲ. ನಾನು ಏನು ಮಾತನಾಡಿದರೂ ಅನಗತ್ಯವಾಗಿ ವಿವಾದ ಸೃಷ್ಟಿಸುವ ಕೆಲಸವಾಗುತ್ತಿದೆ. ಯಾಕೆ ಹೀಗೆ ಎಂಬುದು ನನಗೂ ಅರ್ಥವಾಗುತ್ತಿಲ್ಲ ಎಂದರು.

Home add -Advt

ನಮ್ಮದು ರಾಷ್ಟ್ರೀಯ ಪಕ್ಷ. ಹಾಗಾಗಿ ಪಕ್ಷದಲ್ಲಿ ಯಾರು ಬೇಕು, ಯಾರು ಬೇಡ ಎಲ್ಲವನ್ನೂ ವರಿಷ್ಠರು ನಿರ್ಧರಿಸುತ್ತಾರೆ ಎಂದು ಹೇಳಿದರು.
ವರಿಷ್ಠರು ಸೂಚಿದ ತಕ್ಷಣ ರಾಜೀನಾಮೆ : ಯಡಿಯೂರಪ್ಪ ಶಾಕಿಂಗ್ ಹೇಳಿಕೆ

Related Articles

Back to top button