ಪ್ರಗತಿವಾಹಿನಿ ಸುದ್ದಿ; ಹಾಸನ: ಬಿಸಿಲ ಝಳದ ನಡಿವೆಯೇ ರಾಜ್ಯದಲ್ಲಿ ಹೆಚ್ 3 ಎನ್ 2 ಎಂಬ ಹೊಸ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಹೊಸ ಸೋಂಕು ರಾಜ್ಯದಲ್ಲಿ ಮೊದಲ ಬಲಿ ಪಡೆದಿದೆ.
ನೆಗಡಿ, ಕೆಮ್ಮು, ಜ್ವರ, ಗಂಟಲು ನೋವಿನಂತಹ ಲಕ್ಷಣಗಳಿಂದ ಹಲವು ಜಿಲ್ಲೆಗಳಲ್ಲಿ ಜನರು ತತ್ತರಿಸುತ್ತಿದ್ದಾರೆ. ಈ ರೀತಿಯ ಲಕ್ಷಣಗಳು H3N2 ಎಂಬ ವೈರಸ್ ಲಕ್ಷಣಗಳಾಗಿದ್ದು, ಇಂತಹ ಸಮಸ್ಯೆ ಕಂಡುಬಂದರೆ ತಕ್ಷಣ ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ.
H3N2 ವೈರಸ್ ಗೆ ಹಾಸನ ಜಿಲ್ಲೆಯಲ್ಲಿ ವೃದ್ಧರೊಬ್ಬರು ಸಾವನ್ನಪ್ಪಿದ್ದಾರೆ. ಹಾಸನ ಮೂಲದ 82 ವರ್ಷದ ವೃದ್ಧರು ಚಳಿ, ಜ್ವರ, ಗಂಟಲು ಸಮಸ್ಯೆಯಿಂದ ಬಳಲುತ್ತಿದ್ದರು. ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. H3N2 ವೈರಸ್ ನಿಂದ ವೃದ್ಧರು ಮೃತಪಟ್ಟಿದ್ದಾಗಿ ಆರೋಗ್ಯ ಇಲಾಖೆ ತಿಳಿಸಿದೆ.
ಈಗಗಾಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ H3N2 ವೈರಸ್ ಹರಡುತ್ತಿದ್ದು, ಹಾಸನ ಜಿಲ್ಲೆಯಲ್ಲಿಯೇ 6 ಜನರಲ್ಲಿ ಸೋಂಕು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ