ಪ್ರಗತಿವಾಹಿನಿ ಸುದ್ದಿ, ಕೊಲ್ಲಂ: ಇಲ್ಲಿನ NEET ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿನಿಯರ ಒಳ ಉಡುಪುಗಳನ್ನು ತೆಗೆಸಿದ ಪ್ರಕರಣ ದೇಶಾದ್ಯಂತ ಕಟು ಟೀಕೆಗಳಿಗೆ ಗುರಿಯಾಗುತ್ತಿರುವ ಬೆನ್ನಿಗೇ “ತಲೆ ಕೂದಲಿನಿಂದ ಮಾನ ಮುಚ್ಚಿಕೊಳ್ಳಬೇಕಾಗಿ ಬಂದಿದ್ದು ಹೀನಾಯ ಅನುಭವ” ಎಂದು ವೈದ್ಯಕೀಯ ಸೀಟ್ ಆಕಾಂಕ್ಷಿಯೊಬ್ಬಳು ಹೇಳಿಕೊಂಡಿದ್ದಾಳೆ.
“ಪರೀಕ್ಷಾ ಕೇಂದ್ರಕ್ಕೆ ಹೋಗುತ್ತಿದ್ದ ವೇಳೆ ಮೇಲ್ಭಾಗದ ಒಳ ಉಡುಪು ಸಹ ತೆಗೆಸಲಾಯಿತು. ಪುರುಷ ಪರೀಕ್ಷಾಕಾಂಕ್ಷಿಗಳೂ ಪರೀಕ್ಷೆಗೆ ಹಾಜರಾಗುತ್ತಿದ್ದು ಅವರ ಪಕ್ಕದಲ್ಲೇ ನಾವು ಕುಳಿತುಕೊಳ್ಳಬೇಕಾಗುತ್ತದೆ. ದುಪಟ್ಟಾ ಕೂಡ ಧರಿಸಿರದ ಕಾರಣ ನಮ್ಮ ಕೂದಲಿನಿಂದ ಎದೆ ಭಾಗ ಮುಚ್ಚಿಕೊಳ್ಳಬೇಕಾಯಿತು” ಎಂದು ವಿದ್ಯಾರ್ಥಿನಿ ಅಳಲು ತೋಡಿಕೊಂಡಿದ್ದಾರೆ.
“ಅಧಿಕಾರಿಗಳ ಈ ವರ್ತನೆಯಿಂದ ನಾವು ತೀವ್ರ ಮಾನಸಿಕ ಒತ್ತಡದಲ್ಲಿ ಪರೀಕ್ಷೆ ಬರೆಯಬೇಕಾಯಿತು” ಎಂದು ಸಹ ವಿದ್ಯಾರ್ಥಿನಿ ಹೇಳಿಕೊಂಡಿದ್ದಾಳೆ.
ನೀಟ್ ಪರೀಕ್ಷೆಯಲ್ಲಿ ಒಳ ಉಡುಪು ತೆಗೆಸಿದ ಪ್ರಕರಣ; ಐವರು ಮಹಿಳೆಯರ ಬಂಧನ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ