Latest

*ಹೇರ್ ಡ್ರೈಯರ್ ಬ್ಲಾಸ್ಟ್: ಮಹಿಳೆಯ ಬೆರಳುಗಳು ಛಿದ್ರ ಛಿದ್ರ*

ಪ್ರಗತಿವಾಹಿನಿ ಸುದ್ದಿ: ಹೇರ್ ಡ್ರೈಯರ್ ಬಳಸುವಾಗ ಸ್ವಲ್ಪ ಎಚ್ಚರದಿಂದ ಇರುವುದು ಅಗತ್ಯ. ಹೇರ್ ಡ್ರೈಯರ್ ಬ್ಲಾಸ್ಟ್ ಆಗಿ ಮಹಿಳೆಯ ಕೈ ಬೆರಳುಗಳೇ ಛಿದ್ರ ಛಿದ್ರವಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ನಲ್ಲಿ ನಡೆದಿದೆ.

ಬಸಮ್ಮ ಎಂಬ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು, ಇಳಕಲ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊರಿಯರ್ ನಲ್ಲಿ ಬಂದಿದ್ದ ಹೇರ್ ಡ್ರೈಯರ್ ನ್ನು ಓಪನ್ ಮಾಡಿದ್ದ ಬಸಮ್ಮ, ಚೆಕ್ ಮಾಡಲು ಸ್ವಿಚ್ ಆನ್ ಮಾಡಿದ್ದಾರೆ. ಅಷ್ಟರಲ್ಲೇ ಹೇರ್ ಡ್ರೈಯರ್ ಸ್ಫೋಟಗೊಂಡಿದೆ.

ಮಹಿಳೆಯ ಕೈ ಬೆರಳು ಛಿದ್ರ ಛಿದ್ರಗೊಂಡು ಮನೆಯ ತುಂಬೆಲ್ಲ ರಕ್ತ ಚಿಮ್ಮಿದೆ. ಗಂಭೀರವಾಗಿ ಗಾಯಗೊಂಡಿರುವ ಬಸಮ್ಮ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಳಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Home add -Advt

Related Articles

Back to top button