ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬೆಂಗಳೂರಿನ ಹೆಚ್ ಎ ಎಲ್ ವಿಮಾನ ನಿಲ್ದಾಣದಲ್ಲಿ ಭಾರಿ ಅನಾಹುತವೊಂದು ಸ್ವಲ್ಪದರಲ್ಲಿ ತಪ್ಪಿದೆ. ತಾಂತ್ರಿಕ ದೋಷದಿಂದಾಗಿ ಖಾಸಗಿ ವಿಮನವೊಂದು ತುರ್ತು ಭೂಸ್ಪರ್ಶ ಮಾಡುವಾಗ, ವಿಮಾನದ ಮೂತಿ ನೆಕ್ಕಪ್ಪಳಿಸಿದ ಘಟನೆ ನಡೆದಿದೆ.
ಹೆಚ್ ಎ ಎಲ್ ನಿಂದ ಟೇಕ್ ಆಫ್ ಆಗಿ ಬಿಐ ಎ ಎಲ್ ಗೆ ಹೊರಟಿದ್ದ VT-KBN ಹೆಸರಿನ 1A ವಿಮಾನ ಹೆಚ್ ಎ ಎಲ್ ನಲ್ಲಿ ವಾಪಸ್ ತುರ್ತು ಭೂ ಸ್ಪರ್ಶ ಮಾಡಿದೆ. ಮುಂಭಾಗದ ವ್ಹೀಲ್ ನಲ್ಲಿ ತಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲಾಯಿತು.
ವಿಮಾನ ಲ್ಯಾಂಡಿಂಗ್ ವೇಳೆ ವಿಮಾನ ಏಕಾಏಕಿ ಮಗುಚಿ ಬೀಳುವ ಹಂತಕ್ಕೆ ಹೋಗಿದೆ. ವಿಮಾನದ ಮುಂಭಾಗ ನೆಲಕ್ಕೆ ಗುದ್ದಿದೆ. ವಿಮಾನದಲ್ಲಿ ಇಬ್ಬರು ಪೈಲಟ್ ಗಳು ಇದ್ದರು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ