Latest

ಹಂಸಲೇಖ ಕ್ಷಮೆಯಾಚನೆ; ನನ್ನ ಹೆಂಡತಿಗೇ ಹಿಡಿಸಲಿಲ್ಲ ಎಂದ ನಾದಬ್ರಹ್ಮ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪೇಜಾವರಿ ಶ್ರೀಗಳ ಬಗ್ಗೆ ನಾದಬ್ರಹ್ಮ ಡಾ.ಹಂಸಲೇಖ ನೀಡಿದ್ದ ಹೇಳಿಕೆ ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದ್ದು, ಹಂಸಲೇಖ ಕ್ಷಮೆಯಾಚಿಸಿದ್ದಾರೆ.

ಇತ್ತೀಚೆಗೆ ಮೈಸೂರಿನಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಹಂಸಲೇಖ, ಪೇಜಾವರ ಸ್ವಾಮಿಗಳು ದಲಿತರ ಮನೆಗೆ ವಾಸ್ತವ್ಯಕ್ಕೆ ಹೋಗಿದ್ದಾರೆ ಅಂತ ಸ್ಟೇಟ್ ಮೆಂಟ್ ಬಂದಿದೆ. ಪೇಜಾವರ ಶ್ರೀಗಳು ದಲಿತರ ಮನೆಗೆ ಹೋಗಿ ಅಲ್ಲಿ ಕುಳಿತು ಕೊಳ್ಳಬಹುದಷ್ಟೇ, ಅವರು ಕೋಳಿ ಕೊಟ್ಟ’ರೆ ತಿನ್ನೋಕೆ ಆಗುತ್ತದೆಯೇ? ಕೋಳಿ ಬೇಡ, ಕುರಿ ರಕ್ತದ ಫ್ರೈ ಮಾಡಿಕೊಟ್ಟರೆ ತಿಂತಾರಾ? ಲಿವರ್ ಫ್ರೈ ತಿಂತಾರಾ? ಆಗುತ್ತಾ? ಅಂದರೆ ದಲಿತರ ಮನೆಗೆ ಬಲಿತರು ಹೋಗೋದು ಏನ್ ದೊಡ್ಡ ವಿಷ್ಯ ಅಂತ ನನಗೆ ಅನಿಸಿತು. ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಶುರು ಮಾಡಿದರು. ಈಗ ಎಲ್ಲರೂ ಗ್ರಾಮ ವಾಸ್ತವ್ಯ ಶುರು ಮಾಡಿದರು ಎಂದು ಹೇಳಿದ್ದರು.

ಹಂಸಲೇಖ ಅವರ ಈ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು, ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಕ್ಷಮೆಯಾಚಿಸಿದ್ದಾರೆ. ನನ್ನ ಮಾತುಗಳಿಗೆ ಕ್ಷಮೆಯಿರಲ್ಲಿ. ನನಗೆ ಗೊತ್ತಿದೆ ಎಲ್ಲಾ ಮಾತುಗಳು ವೇದಿಕೆಗಳಿಗಲ್ಲ. ಅದು ತಪ್ಪು ಎಂದು. ನುಡಿದರೆ ಮುತ್ತಿನ ಹಾರದಂತಿರಬೇಕು ಅನ್ನೋ ರೀತಿಯಲ್ಲಿ ಇರಬೇಕಿತ್ತು. ನಾನು ಹಾಗೆಯೇ ಅಲಂಕರಿಸಬೇಕಿತ್ತು.. ಅಸ್ಪೃಶ್ಯತೆ ಇದು ನಮ್ಮ ದೇಶಕ್ಕೆ ಅಂಟಿದ ಶಾಪ. ಇದು ನನ್ನ ಮಾತಲ್ಲ, ಜಿ.ಕೃಷ್ಣಮೂರ್ತಿಗಳ ಸ್ಟೇಟ್ ಮೆಂಟ್. ಅಸ್ಪೃಶ್ಯತೆ ತೊಡೆದು ಹಾಕಲು ಪೇಜಾವರ ಶ್ರೀಗಳಂತಹ ಅನೇಕ ಗುರು ಹಿರಿಯರು ನಡೆಸುತ್ತಿರುವ ಪ್ರಯತ್ನ ಹಾಗೂ ಸಂಧಾನಗಳ ಬಗ್ಗೆ ನನಗೆ ಗೌರವವಿದೆ. ಕಲಾರಂಗದಲ್ಲಿಯೂ ಅಸ್ಪೃಶ್ಯತೆ ಗಾಳಿ ಹಿಂದೆ ದಟ್ಟವಾಗಿತ್ತು.  ಅದೀಗ ಮಾಯವಾಗಿದೆ. ಭಾರತದಲ್ಲೂ ಅದು ಕರಗಿ ಮಾಯವಾಗುವ ದಿನ ಬಂದಿದೆ ಎಂದು ಹೇಳಿದರು.

ನಾನು ಅಲ್ಲಿ ಆಡಿದ ಮಾತುಗಳು ಸ್ವತ: ನನ್ನ ಹೆಂಡತಿಗೇ ಹಿಡಿಸಲಿಲ್ಲ. ಆಕೆ ಅದನ್ನು ಪ್ರತಿಭಟಿಸಿದಳು. ನನ್ನ ಸಂಗೀತ ಹೇಗೆ ಎಲ್ಲರಿಗೂ ಸುಖ ಕೊಡುತ್ತೋ ಹಾಗೇ ನನ್ನ ಬದುಕು ಕೂಡ ಎಲ್ಲರಿಗೂ ಸುಖ ಕೊಡಬೇಕು. ಇದು ನನ್ನ ಜೀವನದ ಗುರಿ. ಅನಿಷ್ಟಗಳನ್ನು ತೊಡೆದುಹಾಕುವ ದೃಷ್ಟಿಯಲ್ಲಿ ನನ್ನ ಪಾತ್ರವೂ ಇದ್ದರೆ ಅದನ್ನು ನಾನು ಮಾಡಿಯೇ ಮಾಡುತ್ತೇನೆ.
ಮಾಜಿ ಸಚಿವ ಜನಾರ್ಧನ ರೆಡ್ಡಿ ಆಸ್ಪತ್ರೆಗೆ ದಾಖಲು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button