ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಗ್ರಾಮೀಣ ಕ್ಷೇತ್ರದ ಸುಳೇಭಾವಿ ಗ್ರಾಮದ ಶ್ರೀ ಸಿದ್ದೇಶ್ವರ ದೇವಸ್ಥಾನದ ನೂತನ ಸಮುದಾಯ ಭವನ ಕಟ್ಟಡದ ನಿರ್ಮಾಣದ ಸಲುವಾಗಿ ಲಕ್ಷ್ಮಿ ಹೆಬ್ಬಾಳಕರ್ ಅವರ ಶಾಸಕರ (MLA Fund) ಅನುದಾನದ ವತಿಯಿಂದ 7 ಲಕ್ಷ ರೂ. ಕೊಡಲಾಗುತ್ತಿದ್ದು, ಈ ಪೈಕಿ ಮೊದಲನೇ ಕಂತಿನಲ್ಲಿ 3.90 ಲಕ್ಷ ರೂ.ಗಳ ಚೆಕ್ ನ್ನು ಗುರುವಾರ ದೇವಸ್ಥಾನ ಕಮೀಟಿಯವರಿಗೆ ಹಸ್ತಾಂತರಿಸಲಾಯಿತು.
ಲಕ್ಷ್ಮಿ ಹೆಬ್ಬಾಳಕರ್ ಅವರ ಅನುಪಸ್ಥಿತಿಯಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್ ಚೆಕ್ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಗ್ರಾಮ ಪಂಚಾಯತಿಯ ಅಧ್ಯಕ್ಷ, ಉಪಾಧ್ಯಕ್ಷ, ಸರ್ವಸದಸ್ಯರು, ಸಿದ್ದಬಸವ ಮನತುರಗಿಮಠ, ಶ್ರೀಶೈಲ ಶಾಸ್ತ್ರೀ ಹಿರೇಮಠ, ನಾಗಯ್ಯ ಕುಡಚಿಮಠ, ವಿಶ್ವನಾಥ ಹೆಬ್ಬಳ್ಳಿ, ನಾಗರಾಜ ಬೆಳಗಾವಿ, ರಾಜು ಹಂಪಿಹೊಳಿ, ಶಶಿಧರ್ ಕುಡಚಿಮಠ, ವಿನಾಯಕ ಅಂಕಲಗಿ, ದಯಾನಂದ ಸಂಬರ್ಗಿಮಠ ಮುಂತಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ