
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೆಎಲ್‌ಇಯ ಆರ್‌ಎಲ್‌ಎಸ್ ಇನ್‌ಸ್ಟಿಟ್ಯೂಟ್‌ನ ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್ ವಿದ್ಯಾರ್ಥಿ ಸಮರ್ಥ ಘಾಟ್ಗೆ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಭಾಗವಹಿಸುವ ಎನ್‌ಸಿಸಿ ತುಕಡಿಗೆ ಆಯ್ಕೆಯಾಗಿದ್ದಾರೆ.
ಜನವರಿ 4 ರಂದು ಪ್ರಾರಂಭವಾದ ಗಣರಾಜ್ಯೋತ್ಸವ ಶಿಬಿರದಲ್ಲಿ ಭಾಗವಹಿಸಿದ 1000 ಎನ್‌ಸಿಸಿ ಕೆಡೆಟ್‌ಗಳ ಭಾಗವಾಗಿರುವ ಸಮರ್ಥ್, ಬಿಸಿಎದಲ್ಲಿ IIIನೆ ಸೆಮಿಸ್ಟರ್‌ನಲ್ಲಿ ಓದುತ್ತಿದ್ದಾನೆ. ಈಗ ಅವರನ್ನು ನ್ಯಾಷನಲ್ ಕೆಡೆಟ್ ಕಾರ್ಪ್ಸ್ನ ಪುರುಷ ತುಕಡಿಯ ಭಾಗವಾಗಿ ಆಯ್ಕೆ ಮಾಡಲಾಗಿದೆ.