*ಕಲ್ಲೋಳಿ ಹನುಮ ದೇವಾಲಯದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪೂಜೆ*
ನಾಡಿನ ಸಮಸ್ತ ಜನತೆಗೆ ಹನುಮ ಜಯಂತಿ ಶುಭಾಷಯ ತಿಳಿಸಿದ ಸಚಿವರು
ಪ್ರಗತಿವಾಹಿನಿ ಸುದ್ದಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಹನುಮ ಜಯಂತಿ ಹಿನ್ನೆಲೆಯಲ್ಲಿ ಕಲ್ಲೋಳಿ ಹನುಮ ದೇವಾಲಯ ಹಾಗೂ ಶ್ರೀ ರಾಮ ಮಂದರಿದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಇದಕ್ಕೂ ಮುನ್ನ ಸುಲಧಾಳ ಗ್ರಾಮದಲ್ಲಿರುವ ಹನುಮ ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ದರು.
ನಾಡಿನ ಸಮಸ್ತ ಜನರಿಗೆ ಒಲಿತಾಗಲಿ. ಮಳೆ, ಬೇಳೆ ಚೆನ್ನಾಗಿ ಆಗಲಿ, ನಾಡಿನ ಜನರು ಸುಖ ಶಾಂತಿ ಸಮೃದ್ಧಿಯಿಂದ ಬದುಕಲಿ ಎಂದು ಕೇಳಿಕೊಂಡೆ ಎಂದು ಸಚಿವರು ಹೇಳಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿ ಉತ್ತಮ ಅವಕಾಶವಿದ್ದು, ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಅವರನ್ನು ಆರಿಸಿ ಕಳುಹಿಸಿಕೊಡಬೇಕೆಂದು ಮನವಿ ಮಾಡಿದರು.
ಈ ವೇಳೆ ಸ್ಥಳೀಯ ಮುಖಂಡರಾದ ರಾವ್ ಸಾಬ್ ಬೆಳಕೋಡ, ಬಸವರಾಜ್ ಬೆಳಕೋಡ, ಭೀಮರಾಯ್ ಕಡಾಡಿ, ಶಂಕರ್ ಗೋರೊಶಿ, ಚಂದು ಕಲಾಲ್, ಗಂಗಾರಾಮ್ ಕಲಾಲ್ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ