*ಹನುಮಾನ ಚಾಲೀಸಾ ಸಾಮೂಹಿಕ ಪಠಣದ ಬೃಹತ್ ಕಾರ್ಯಕ್ರಮ*
ಪ್ರಗತಿವಾಹಿನಿ ಸುದ್ದಿ: ಜನವರಿ 22ರಂದು ಅಯೋಧ್ಯೆಯಲ್ಲಿ ನಡೆಯುವ ಬಾಲ ರಾಮನ ಪ್ರಾಣಪ್ರತಿಷ್ಟಾಪನೆ ನಿಮಿತ್ತ ಪ್ರಭು ಶ್ರೀರಾಮನ ಚರಣಕ್ಕೆ ಲಕ್ಷ ಲಕ್ಷ ಹನಮಾನ ಚಾಲೀಸಾ ಪಠಣ ಸಮರ್ಪಣೆ ಮಾಡುವ ಐತಿಹಾಸಿಕ ಕಾರ್ಯಕ್ರಮ ೨.೫ಲಕ್ಷಕ್ಕೂ ಅಧಿಕ ಹನುಮಾನ ಚಾಲೀಸಾ ಪಠಣ ಸಮರ್ಪಣೆ ಮಾಡುವ ತಯಾರಿ ಕಳೆದ ೪೫ ದಿವಸಗಳಿಂದ ಸಾವಿರಕ್ಕೂ ಅಧಿಕ ಕಾರ್ಯಕರ್ತರಿಂದ ಬೆಳಗಾವಿ ನಗರದಲ್ಲಿ ನಡೆದಿದೆ.
ವಿಶ್ವಹಿಂದೂ ಪರಿಷತ್ ಪ್ರಮುಖರು ಬೆಳಗಾವಿಯಲ್ಲಿ ಶುಕರವಾರ ಈ ಕುರಿತು ಮಾಹಿತಿ ನೀಡಿದರು.
ಬೆಳಗಾವಿಯಲ್ಲಿ ವಿಶ್ವ ಹಿಂದು ಪರಿಷತ್ತ ಕಾರ್ಯಲಯದಲ್ಲೆ ಇದನ್ನು ಮಾಡಲು ಕಾರಣ ಏನು ಎಂದರೆ, ಅಯೋಧ್ಯೆಯ ಶ್ರೀರಾಮ ಮಂದಿರದ ಹೋರಾಟದಲ್ಲಿ ತಲೆಗೆ ಏಟು ಬಿದ್ದು ರಕ್ತದೊಕುಳಿ ಹರಿದರೂ ಕಾರಸೇವೆ ಮಾಡಲು ನೇತೃತ್ವ ಕೊಟ್ಟ ಅಶೋಕ ಸಿಂಘಾಜಿಯವರು ಬೆಳಗಾವಿಯ ವಿಶ್ವ ಹಿಂದು ಪರಿಷತ್ ಕಾರ್ಯಲಯ ಸಮರಸತಾ ಭವನವನ್ನು ಉದ್ಘಾಟಿಸಿದ್ದರು. ಸಿಂಘಲಜಿ ಅವರಿಗೆ ಹೆಗಲಿಗೆ ಹೆಗಲುಕೊಟ್ಟು ಹೋರಾಟದ ಕಿಚ್ಚು ಹೆಚ್ಚಿಸಲು ಅವಿರತ ದುಡಿದ ಇಬ್ಬರೂ ಹಿರಿಯ ಪ್ರಚಾರಕಾದ ಸದಾನಂದಜೀ ಕಾಕಡೆ, ಬಾಬುರಾವ ದೇಸಾಯಿ ಬೆಳಗಾವಿಯವರು. ವಿಹಿಂಪ ಕಾರ್ಯಾಲಯ ಸಮಾರಸತಾ ಭವನದ ಪಕ್ಕದ ಮೈದಾನದ ಕೇಶವ ಶಾಖೆಯಲ್ಲಿ ತಯಾರಾದ ಸಾಮಾನ್ಯ ಸ್ವಯಂಸೇವಕ ಗೋಪಾಲಜೀ
ಇವತ್ತು ಅಯೋಧ್ಯೆಯ ಮಂದಿರ ನಿರ್ಮಾಣದ ಉಸ್ತುವಾರಿ ವಹಿಸಿದ್ದಾರೆ. ಹಾಗಾಗಿ ವಿಹಿಂಪ ಕಾರ್ಯಾಲಯ ಸಮರಸತಾ ಭವನ ಸದಾ ಧಾರ್ಮಿಕ ಚಟುವಟಿಕೆಯ ಕೇಂದ್ರವಾಗಲಿ ಎಂಬ ಉದ್ದೇಶದಿಂದ ಎಲ್ಲರನ್ನು ಜೋಡಿಸುವ ಸಾಮರಸ್ಯದ ಕೊಂಡಿಯಾಗಲಿ ಎಂಬುದೆ ಎಲ್ಲ ರಾಮಭಕ್ತರ ಮತ್ತು ವಿಹಿಂಪ ಕಾರ್ಯಕರ್ತರ ಅಭಿಲಾಷೆಯಾಗಿದೆ.
ತಮ್ಮ ಎಲ್ಲರ ಸಹಕಾರದಿಂದ ಕಳೆದ ಡಿಸೆಂಬರ ೫ರಿಂದ ಪ್ರತಿನಿತ್ಯ ಸಂಜೆ ೭.೩೦ರಿದ ೮.೩೦ ರ ತನಕ ೧೧ ಸಲ ಹನುಮಾನ ಚಾಲೀಸಾ ಪಠಣ ನೂರಾರು ಮಾತೆಯರೂ, ಮಕ್ಕಳು, ಯುವಕರು ಸೇರಿದಂತೆ ಯಜ್ಞದಂತೆ ವಿಶ್ವ ಹಿಂದು ಪರಿಷತ್ ಕಾರ್ಯಲಯದಲ್ಲಿ ನಡೆಯುತ್ತಾ ಇದೆ.
ಈ ವರೆಗೆ ಸುಮಾರು ೫೧ ಸಾವಿರ ಹನುಮಾನ ಚಾಲಿಸಾ ಪಠಣ ಪೂರ್ಣಗೊಂಡಿದೆ. ಎಲ್ಲ ಹನುಮಾನ ಮತ್ತು ರಾಮಭಕ್ತರ ಅಪೇಕ್ಷೆಯಂತೆ ಜನೇವರಿ ೧೬ ರಿಂದ ೨೦ರ ತನಕ ಅಹೋರಾತ್ರಿ ೨೪ ಘಂಟೆ ಸತತವಾಗಿ ಹನುಮಾನ ಚಾಲೀಸಾ ಪಠಣ ವಿಶ್ವ ಹಿಂದು ಪರಿಷತ್ ಕಾರ್ಯಲಯ
ಸಮರಸತಾ ಭವನದಲ್ಲಿ ರಾಮಭಕ್ತರು ಭಕ್ತಿಯಿಂದ ಪಠಿಸುತ್ತಿದ್ದಾರೆ.
ಈವರೆಗೆ ಪ್ರತಿನಿತ್ಯ ಸಂಜೆ ನಡೆಯುವ ಹನುಮಾನ ಚಾಲೀಸಾ ಪಠಣದಲ್ಲಿ ಸುಮಾರು ೭ ಸಾವಿರಕ್ಕೂ ಹೆಚ್ಚು ಭಕ್ತರು ಭಾಗವಹಿಸಿರುವುದು ಎಲ್ಲರಿಗೂ ಪ್ರೇರಣೆ ಸಿಕ್ಕಂತಾಗಿದೆ. ಅಯ್ಯೋಧೆಯಿಂದ ಬಂದ ಪವಿತ್ರ ಮಂತ್ರಾಕ್ಷತೆ ಮತ್ತು ಪ್ರಭು ಶ್ರೀರಾಮನ ಮಂದಿರದ ಚಿತ್ರದ ಸಹಿತ
ಈವರೆಗೆ ೪,೫ಲಕ್ಷ ಹನುಮಾನ ಚಾಲೀಸಾ ಪ್ರತಿ ಮನೆ ಮನೆಗೆ ತಲುಪಿಸಲಾಗಿದೆ. ೭೦ಕ್ಕೂ ಹೆಚ್ಚು ಹನುಮಾನ ದೇವಸ್ಥಾನಗಳಲ್ಲೂ, ಉಳಿದಂತೆ ಬೇರೆ ದೇವಸ್ಥಾನ, ಮಹಿಳಾ ಮಂಡಳ, ಶಾಲೆಗಳಲ್ಲಿ ಹನುಮಾನ ಚಾಲೀಸಾ ಪಠಣ ನೂರಾರು ಸಂಖ್ಯೆಯಲ್ಲಿ ನಡೆಯುತ್ತಾ ಇದೆ. ವಡಗಾವಿಂ ವಿಠಲ ಮಂದಿರ, ಶಹಾಪುರದ ದಾನಮ್ಮ ಮಂದಿರ ಹೀಗೆ ಬೇರೆ ಬೇರೆ ಕಡೆ ನೂರಾರು ದೇವಸ್ಥಾನ ಮತ್ತು ಬೆಳಗಾವಿ ಸುತ್ತಮುತ್ತಲಿನ ಗ್ರಾಮದಲ್ಲೂ ಹನುಮಾನ ಚಾಲೀಸಾ ಪಠಣದ ಮೂಲಕ ಭಕ್ತಿ ಮತ್ತು ಆರಾಧನೆಯ ಪ್ರವಾಹ ಹರಿಯುತ್ತಾ ಇದೆ.
ಇಂತಹ ಐತಿಹಾಸಿಕ ಕಾರ್ಯಕ್ರಮ ಬೆಳಗಾವಿಯಲ್ಲಿ ನಡೆಯಲು ಹನುಮಾನ ಚಾಲೀಸಾ ಪರಿವಾರದ ಇಚ್ಛೆಯಂತೆ ಸಮಾಜದ ಸಾಧಕರನ್ನ ಹೆಚ್ಚಿನ ಸಮಾಜದ ಪ್ರಮುಖರರನ್ನ ಜೋಡಿಸಿಕೊಂಡು ೨೦ ಜನವರಿ ೨೦೨೪ ಶನಿವಾರದಂದು ಸಂಜೆ ೫.೩೦ಕ್ಕೆ ಬೆಳಗಾವಿಯ ಟಿಳಕವಾಡಿಯ ವ್ಯಾಕ್ಸಿನ್ ಡಿಪೋ ಮತ್ತು ಕಾಲೇಜು ರಸ್ತೆಯಲ್ಲಿರುವ ಸರದಾರ ಮೈದಾನದಲ್ಲಿ ಎರಡೂ ಕಡೆ ಏಕ ಕಾಲದಲ್ಲಿ ಏಕ ಸ್ವರದಲ್ಲಿ ಭಕ್ತಿಯಿಂದ
ಹನುಮಾನ ಚಾಲೀಸಾ ಪಠಣ ಸಾವಿರಾರು ರಾಮಭಕ್ತರಿಂದ ಲಕ್ಷ ಲಕ್ಷ ಹನಮಾನ ಚಾಲೀಸಾ ಪಠಣ ಪ್ರಭು ಶ್ರೀರಾಮನ ಚರಣಗಳಿಗೆ ಅರ್ಪಣೆ ಮಾಡುವ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಎರಡು ಮೈದಾನದಲ್ಲಿ ಒಟ್ಟಾರೆ ೨೦ ಸಾವಿರಕ್ಕೂ ಹೆಚ್ಚು ಶ್ರೀರಾಮ ಮತ್ತು ಹನುಮಾನ
ಭಕ್ತರು ಸೇರಲಿದ್ದಾರೆ. ೫೦೦ ವರ್ಷಗಳ ತರುವಾಯ ದೊರೆತ ಈ ಸುವರ್ಣಾವಕಾಶದಲ್ಲಿ ನಾವೆಲ್ಲಾ ಭಕ್ತಿಯಿಂದ ಭಾಗವಹಿಸಿ ನಮ್ಮ ಕುಟುಂಬದ ಎಲ್ಲಾ ಸದಸ್ಯರು, ಮಕ್ಕಳು, ಮೊಮ್ಮಕ್ಕಳು ಸಹಿತ ಈ ಪುಣ್ಯ ಯಜ್ಞದಲ್ಲಿ ಹನುಮಾನ ಚಾಲೀಸಾ ಪಠಣ ಜಪಿಸಲು ಸಿದ್ದರಾಗುವಂತೆ ಹೆಚ್ಚು ಜನರು ಭಾಗವಹಿಸಲು ಜನರಿಗೆ ವಿಷಯ ತಲುಪಿಸುವ ಸೇವೆ ಮಾಧ್ಯಮ ಮಿತ್ರರಿಂದ ಆಗಲಿ ಎಂದು ವಿಶ್ವ ಹಿಂದು ಪರಿಷತ್ ಮತ್ತು ಹನುಮಾನ
ಚಾಲೀಸಾ ಪರಿವಾರದಿಂದ ವಿಶೇಷ ವಿನಂತಿ.
ಈವರೆಗೂ ಯಾರಿಗಾದರೂ ಅಯೋಧ್ಯೆಯ ಶ್ರೀರಾಮ ಮಂದಿರದ ರಾಮಲಲ್ಲಾ ಮೂರ್ತಿಯ ಪ್ರಾಣಪತ್ರಿಷ್ಠಾಪನೆಯ ಕಾರ್ಯಕ್ರಮದ ಆಮಂತ್ರಣ ಮತ್ತು ಪವಿತ್ರ ಮಂತ್ರಾಕ್ಷತೆ ದೊರೆಯದೆ ಇದ್ದಲ್ಲಿ, ಅವರು ತಮ್ಮ ಹತ್ತಿರದ ಮಂದಿರಗಳಲ್ಲಿ ಇಲ್ಲವೆ ಶಾಸ್ತ್ರಿನಗರದ (ನರ್ತಕಿ ಟಾಕೀಸ್ ಹತ್ತಿರ), ಗೂಡ್ಸ್ ಶೇಡ್ರ ಸ್ತೆಯಲ್ಲಿರುವ ವಿಶ್ವ ಹಿಂದು ಪರಿಷತ್ ಕಾರ್ಯಾಲಯ ಸಮರಸತಾ ಭವನಕ್ಕೆ ಬಂದು ಪಡೆಯಬಹುದು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ