
ಪ್ರಗತಿವಾಹಿನಿ ಸುದ್ದಿ: ಪತಿ ಹಾಗೂ ಅತ್ತೆ-ಮಾವನ ಹಿಂಸೆ, ವರದಕ್ಷಿಣೆ ಕಿರುಕುಳಕ್ಕೆ ನೊಂದ ಉಪನ್ಯಾಸಕಿಯೊಬ್ಬರು ವಿಶ್ವೇಶ್ವರಯ್ಯ ಪಿಕಪ್ ಡ್ಯಾಂಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.
ಪುಷ್ಪಾವತಿ (30) ಆತ್ಮಹತ್ಯೆ ಮಾಡಿಕೊಂಡಿರುವ ಉಪನ್ಯಾಸಕಿ. 11 ತಿಂಗಳ ಹಿಂದಷ್ಟೇ ಪುಷ್ಪಾವತಿ ತಪಸ್ಸಿಹಳ್ಳಿಯ ವೇಣು ಎಂಬುವವರನ್ನು ವಿವಾಹವಾಗಿದ್ದರು. ಮದುವೆಯಾದಾಗಿನಿಂದ ಪತಿ ಮನೆಯಲ್ಲಿ ನಿರಂತರ ಕಿರುಕುಳ ಕೊಡುತ್ತಿದ್ದರು. ಇದೀಗ ತೀವ್ರವಾಗಿ ಮನನೊಂದ ಪುಷ್ಪಾವತಿ ವಿಡಿಯೋ ರೆಕಾರ್ಡ್ ಮಾಡಿಟ್ಟು ಡ್ಯಾಂಗ್ ಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಾವಿಗೂ ಮುನ್ನ ರೆಕಾರ್ಡ್ ಮಾಡಿಟ್ಟಿರುವ ವಿಡಿಯೋದಲ್ಲಿ ಮದುವೆಯಾಗಿ ಬಂದಾಗಿನಿಂದ ಪತಿ ಹಾಗೂ ಅತ್ತೆ-ಮಾವ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರಂತೆ. ಅಲ್ಲದೇ ನಿವೇಶನ ಕೊಡಿಸುವಂತೆ ಒತ್ತಾಯಿಸುತ್ತಿದ್ದರಂತೆ.ಅಲ್ಲದೇ ಪತಿ ಬರಬರುತ್ತ ವಿಚಿತ್ರವಾಗಿ ನಡೆದುಕೊಳ್ಳುತ್ತಿದ್ದನಂತೆ ಮಕ್ಕಳು ಬೇಡ. ನಿನಗೆ ಮಗು ಬೇಕೆಂದರ ತನ್ನ ಸಹೋದರನ ಜೊತೆ ಹೋಗು ಎನ್ನುತ್ತಿದನಂತೆ. ಈ ವಿಚಾರ ಅತ್ತೆ-ಮಾವನಿಗೆ ಹೇಳಿದರೂ ಅವರೂ ಅದೇ ರೀತಿ ಮಾತನಾಡುತ್ತಿದ್ದರು. ಅಲ್ಲದೇ ಮೈದುನ ಕೂಡ ಅದೇ ರೀತಿ ಮಾತನಾಡಲು ಆರಂಭಿಸಿದ್ದ. ವಿಷಯ ತವರಿಗೆ ಹೇಳದಂತೆ ಪತಿ ಹಿಂಸಿಸುತ್ತಿದ್ದ. ತವರು ಮನೆಯವರು ಮನೆಗೆ ಬಂದರೆ ಯಾಕೆ ಬಂದರೆಂದು ಪುಷ್ಪಾವತಿಗೆ ಹೊಡೆಯುತ್ತಿದ್ದರಂತೆ. ಹಿಂಸೆ ತಾಳಲಾರದೇ ಪೊಲೀಸರಿಗೆ ದೂರು ನೀಡುವುದಾಗಿ ಹೇಳಿದ್ದಕ್ಕೆ ಮತ್ತಷ್ಟು ಹಲ್ಲೆ ಮಾಡಿದ್ದಾರೆ. ಗಾಯವಾಗಿದ್ದಕ್ಕೆ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ, ಕಂಪ್ಲೇಂಟ್ ಕೊಟ್ಟರೆ ಮನೆಗೆ ಸೇರಿಸಲ್ಲ ಎಂದು ಬೆದರಿಕೆ ಹಾಕಿದ್ದಾರೆ. ಪತಿ ಹಾಗೂ ಮನೆಯವರ ಕಿರುಕುಳ ಹಿಂಸೆಗೆ ನೊಂದು ಆತ್ಮಹತ್ಯೆ ಮಾಡಿಕೊಳ್ಳುವುತ್ತಿರುವುದಾಗಿ ಹೇಳಿದ್ದಾರೆ.
ದೀಪಾವಳಿ ಹಬ್ಬದ ದಿನವೇ ಉಪನ್ಯಾಸಕಿ ಡ್ಯಾಂಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ.