Film & Entertainment

*ಹರ್ಷಿಕಾ ಪೂಣಚ್ಚಗೆ ಅದ್ದೂರಿ ಬೇಬಿ ಶವರ್ ಕಾರ್ಯಕ್ರಮ*

ಸ್ಯಾಂಡಲ್ ವುಡ್ ತಾರೆಯರಿಂದ ಶುಭ ಹಾರೈಕೆ


ಪ್ರಗತಿವಾಹಿನಿ ಸುದ್ದಿ:
ಹರ್ಷಿಕಾ ಭುವನ್ ದಂಪತಿಗೆ ಅದ್ದೂರಿ ಬೇಬಿ ಶವರ್ ಕಾರ್ಯಕ್ರಮವನ್ನು ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಶಿಲ್ಪಾ ಗಣೇಶ್ ದಂಪತಿ ಆಯೋಜಿಸಿದ್ದರು.

ಇನ್ನು ಕೆಲವೇ ದಿನಗಳಲ್ಲಿ ಮಗುವಿನ ಆಗಮನದ ಖುಷಿಯಲ್ಲಿರುವ ಹರ್ಷಿಕಾ ಭುವನ್ ದಂಪತಿಗಳಿಗೆ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಶಿಲ್ಪಾ ಗಣೇಶ್ ಅವರು ಸಿನಿಮಾ ಇಂಡಸ್ಟ್ರಿ ಯ ತಮ್ಮ ಎಲ್ಲಾ ಗೆಳೆಯರನ್ನು ಆಹ್ವಾನಿಸಿ ಅದ್ದೂರಿಯಾದ “ಬೇಬಿ ಶವರ್” ಮಾಡಿದ್ದಾರೆ. ಆಕ್ಷನ್ ಕ್ವೀನ್ ಮಾಲಾಶ್ರೀ, ಮಗಳು ಆರಾಧನಾ, ಶೃತಿ ಹಾಗೂ ಮಗಳು ಗೌರಿ , ಪ್ರಿಯಾಂಕಾ ಉಪೇಂದ್ರ ,ಅನು ಪ್ರಭಾಕರ್ ರಘು ಮುಖರ್ಜಿ, ನಾಯಕಿಯರಾದ ಶರಣ್ಯ, ನಿಕಿತಾ , ಅಮೂಲ್ಯ ಜಗದೀಶ್, ದಿಶಾ ಹಾಗೂ ಡಾ. ಪ್ರೀತಿ ಸುಧಾಕರ್ , ಶೀಲಾ ಯೋಗೀಶ್ವರ್ ಇನ್ನು ಅನೇಕರು ಬೇಬಿ ಶವರ್ ನಲ್ಲಿ ಭಾಗಿಯಗಿದ್ದರು.

ಅಮ್ಮನಾಗುವ ಸಂತಸದಲ್ಲಿರುವ ಹರ್ಷಿಕಾ ಗೆ ಉಡುಗೊರೆಗಳ ಸುರಿ ಮಳೆಯೇ ಬಂದಿದೆ … ಬೇಬಿ ಶವರ್ ನಲ್ಲಿ ಹಿರಿಯರು ಕಿರಿಯರು ಎಲ್ಲರು ಒಟ್ಟಿಗೆ ಕುಣಿದು ,ಹಾಡಿ ಖುಷಿ ಪಟ್ಟಿದ್ದು ವಿಶೇಷವಾಗಿತ್ತು . ಶೃತಿ ಅವರ ಮಗಳು ಗೌರಿ ಹರ್ಷಿಕಾಗಾಗಿ ಹಾಡು ಹಾಡಿ ಸರ್ ಪ್ರೈಸ್ ನೀಡಿದ್ದಾರೆ..

Home add -Advt

ಬೇಬಿ ಥೀಮ್ ಕೇಕ್, ಥೀಮ್ ಡೆಕೊರೇಷನ್ ಬೇಬಿ ಶವರ್ ನ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿತ್ತು … ಈ ಎಲ್ಲಾ ಕಾರ್ಯಗಳನ್ನು ಶಿಲ್ಪಾ ಗಣೇಶ್ ಖುದ್ದಾಗಿ ನಿಂತು ಈ ಯುವ ಜೋಡಿ ಗೋಸ್ಕರ ಮಾಡಿದ್ದಾರೆ. ಅಕ್ಟೋಬರ್ ನಲ್ಲಿ ಮಗುವಿನ ಆಗಮನ ನಿರೀಕ್ಷೆಯಲ್ಲಿದ್ದಾರೆ ಹರ್ಷಿಕಾ ಮತ್ತು ಭುವನ್.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button