Latest

ಶೌಚಾಲಯದಲ್ಲೇ ಬಂಧಿಯಾಗಿರುವ ಮಹಿಳೆ

ಪ್ರಗತಿವಾಹಿನಿ ಸುದ್ದಿ; ಚಂಡೀಗಢ: ಕಳೆದ ಒಂದುವರೆ ವರ್ಷದಿಂದ ಶೌಚಾಲಯದಲ್ಲೇ ಬಂಧಿಯಾಗಿದ್ದ 35 ವರ್ಷದ ಮಹಿಳೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ರಕ್ಷಿಸಿರುವ ಘಟನೆ ಹರ್ಯಾಣದ ಪಾಣಿಪತ್ ಜಿಲ್ಲೆಯ ರಿಷ್ಪುರ ಗ್ರಾಮದಲ್ಲಿ ನಡೆದಿದೆ.

ಮಹಿಳೆಯ ಪತಿ ನರೇಶ್ ಕುಮಾರ್ ಪತ್ನಿಗೆ ಅನ್ನ, ನೀರು ಕೊಡದೇ ಮನಸಿಕ ಅಸ್ವಸ್ಥೆ ಎಂದು ಆರೋಪಿಸಿ ಆಕೆಯನ್ನು ಶೌಚಾಲಯದಲ್ಲೇ ಕೂಡಿಹಾಕಿದ್ದ ಎನ್ನಲಾಗಿದೆ. ಮಹಿಳೆಗೆ 15 ವರ್ಷದ ಮಗಳು ಹಾಗೂ 13, 11 ವರ್ಷದ ಗಂಡು ಮಕ್ಕಳಿದ್ದು, ಯಾರೂ ಕೂಡ ಆಕೆ ಸಹಾಯ ಮಾಡುತ್ತಿರಲಿಲ್ಲ.

ಮಹಿಳೆ ಒಂದುವರೆ ವರ್ಷದಿಂದ ಟಾಯ್ಲೆಟ್ ನಲ್ಲಿ ಬಂಧಿಯಾಗಿರುವ ವಿಷಯ ತಿಳಿದ ಜಿಲ್ಲಾ ಮಹಿಳಾ ರಕ್ಷಣಾ ಅಧಿಕಾರಿ ರಜಿನಿ ಗುಪ್ತಾ ಪೊಲೀಸರ ಜೊತೆ ಸ್ಥಳಕ್ಕೆ ಭೇಟಿ ನೀಡಿ ಮಹಿಳೆಯ ರಕ್ಷಣೆ ಮಾಡಿದ್ದಾರೆ.

ಒಂದುವರೆವರ್ಷದಿಂದ ಮಹಿಳೆಗೆ ಸರಿಯಾದ ಆಹಾರವನ್ನೂ ನೀಡದ ಕಾರಣ ಆಕೆಗೆ ಎದ್ದು ನಿಲ್ಲುವ ಶಕ್ತಿಯೂ ಇಲ್ಲ. ಮಹಿಳೆಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ರಜನಿ ಗುಪ್ತಾ ತಿಳಿಸಿದ್ದಾರೆ.

ಪತಿಯ ಆರೋಪದಂತೆ ಮಹಿಳೆ ಮಾನಸಿಕ ಅಸ್ವಸ್ಥೆಯಲ್ಲ ಎಂದು ತಿಳಿದುಬಂದಿದೆ. ಆಕೆ ತನ್ನ ಮನೆಯವರನ್ನು ಗುರುತಿಸುತ್ತಿದ್ದಾಳೆ ಅಲ್ಲದೇ ಅಧಿಕಾರಿಗಳು ಕೇಳುವ ಎಲ್ಲಾ ಪ್ರಶ್ನೆಗಳಿಗೂ ಸರಿಯಾಗಿಯೇ ಉತ್ತರ ನೀಡುತ್ತಿದ್ದಾಳೆ. ಆಕೆ ಮಾನಸಿಕ ಅಸ್ವಸ್ಥೆ ಎಂಬ ಬಗ್ಗೆ ಪತಿ ನರೇಶ್ ಕುಡೂ ಯಾವುದೇ ದಾಖಲೆ ನೀಡುತ್ತಿಲ್ಲ ಎಂದಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button