Kannada NewsKarnataka NewsLatest
*ವಿದ್ಯಾರ್ಥಿನಿಯ ಹಿಂದೆ ಬಿದ್ದ ಆಟೋ ಚಾಲಕ: ಪ್ರೀತಿಸುವಂತೆ ಕಿರುಕುಳ; ರಸ್ತೆಯಲ್ಲಿ ಎಳೆದಾಡಿ ಹಿಂಸೆ: ಆಟೋ ಚಾಲಕ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಅಪ್ರಾಪ್ತ ಹಿಂದೆ ಬಿದ್ದಿದ್ದ ಆಟೋ ಚಾಲಕನೊಬ್ಬ ಪ್ರೀತಿಸುವಂತೆ ಪೀಡೀಸುತ್ತಿದ್ದ ಘಟನೆ ಹಾಸನ ಜಿಲ್ಲೆಯ ಬೇಲೂರು ಪಟ್ಟಣದಲ್ಲಿ ನಡೆದಿದೆ.
ವಿದ್ಯಾರ್ಥಿನಿಯೊಬ್ಬಳ ಹಿಂದೆ ಬಿದ್ದಿದ್ದ ಆಟೋ ಚಾಲಕ ಮನು ಆಕೆಯನ್ನು ಪ್ರೀತಿಸುವಂತೆ ಬಲವಂತ ಮಾಡುತ್ತಿದ್ದ. ವಿದ್ಯಾರ್ಥಿನಿ ನಿರಾಕರಿಸುತ್ತಿದ್ದಂತೆ ರಸ್ತೆಯಲ್ಲಿ ಆಕೆಯನ್ನು ಅಡ್ದಗಟ್ಟಿ ಅವಾಚ್ಯವಾಗಿ ನಿಂದಿಸಿ ಬೆದರಿಕೆ ಹಾಕಿದ್ದಾನೆ.
ಅಷ್ಟೇ ಅಲ್ಲ ವಿದ್ಯಾರ್ಥಿನಿಯ ಮೈಕೈ ಮುಟ್ಟಿ ಎಳೆದಾಡಿ ಕಿರುಕುಳ ನೀಡಿದ್ದಾನೆ. ಆಟೋ ಚಾಲಕನ ವರ್ತನೆಗೆ ಬೇಸತ್ತ ವಿದ್ಯಾರ್ಥಿನಿ ಮನೆಯಲ್ಲಿ ವಿಷಯ ಹೇಳಿದ್ದಾಳೆ. ಪೋಷಕರು ಬೇಲೂರು ಪೊಲೀಸರಿಗೆ ದೂರು ನೀಡಿದ್ದರು.
ಸದ್ಯ ಆಟೋ ಚಾಲಕ ಮನುನನ್ನು ಬಂಧಿಸಿರುವ ಪೊಲೀಸರು ಪೋಕ್ಸೋ ಕೇಸ್ ದಾಖಲಿಸಿದ್ದಾರೆ.




