Latest

ಭಾರಿ ಮಳೆಗೆ ಕೆರೆಯಂತಾದ ರಸ್ತೆಗಳು; ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗಳಲ್ಲಿ ಮಳೆ ಅವಾಂತರ; ಲೋಕೋಪಯೋಗಿ ಸಚಿವರಿಂದ ಖುದ್ದು ಪರಿಶೀಲನೆ

ಪ್ರಗತಿವಾಹಿನಿ ಸುದ್ದಿ; ಹಾಸನ: ರಾಜ್ಯಾದ್ಯಂತ ಭಾರಿ ಮಳೆಯಾಗುತ್ತಿದ್ದು, ಕರಾವಳಿ, ಮಲೆನಾಡು ಭಾಗದಲ್ಲಿ ಹಲವು ಜಿಲ್ಲೆಗಳಲ್ಲಿ ಮಳೆಯಿಂದಾಗಿ ಅವಾಂತರಗಳು ಸೃಷ್ಟಿಯಾಗಿವೆ. ಕೃಷಿ ಭೂಮಿ, ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿದ್ದು, ಹಲವೆಡೆ ಮನೆ ಗೋಡೆ ಕುಸಿದಿದ್ದರೆ ಇನ್ನು ಹಲವೆಡೆ ಭೂಕುಸಿತವುಂಟಾಗುತ್ತಿದೆ. ವರುಣಾರ್ಭಟಕ್ಕೆ ಜನರು ತತ್ತರಿಸಿದ್ದಾರೆ.

ಹಾಸನ ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ಹಾಸನ-ಕೊಣನೂರು ರಸ್ತೆ ಜಲಾವೃತಗೊಂಡಿದ್ದು, ಸಂಪರ್ಕ ಕಡಿತಗೊಂಡಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಅತಿ ಮಳೆಯಿಂದಾಗಿ ಹಾನಿಯಾಗಿರುವ ಪರಿಸ್ಥಿತಿಯನ್ನು ಅವಲೋಕಿಸಲು ಲೋಕೋಪಯೋಗಿ ಸಚಿವ ಸಿ. ಸಿ. ಪಾಟೀಲ್ ಖುದ್ದು ಭೇಟಿ ನೀಡಿದ್ದು, ಹಲವೆಡೆ ರಸ್ತೆಗಳು ಸಂಪೂರ್ಣ ಹಾನಿಯಾಗಿರುವುದು ಬೆಳಕಿಗೆ ಬಂದಿದೆ.

ಈ ನಡುವೆ ಹಾಸನ ಸಕಲೇಶಪುರದ ನಡುವೆ ಬೈರಾಪುರದಲ್ಲಿ ಮಳೆ ಅವಾಂತರದಿಂದಾಗಿ ಹೆದ್ದಾರಿ ಅಕ್ಕಪಕ್ಕದ ಸರ್ವಿಸ್ ರಸ್ತೆಗಳಲ್ಲಿ ಮತ್ತು ಸೇತುವೆಗಳ ಮೇಲೆ ನೀರು ನಿಂತು ಉಂಟಾದ ಸಮಸ್ಯೆಯನ್ನು ಸಚಿವ ಸಿ.ಸಿ. ಪಾಟೀಲರು ಖುದ್ದಾಗಿ ಪರಿಶೀಲಿಸಿ, ಶೀಘ್ರವಾಗಿ ದುರಸ್ತಿ ಕಾಮಗಾರಿ ಕೈಗೊಳ್ಳುವಂತೆ ಜಿಲ್ಲಾಡಳಿತ ಮತ್ತು ರಾಷ್ಟ್ರೀಯ ಹೆದ್ದಾರಿ ಉಸ್ತುವಾರಿ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಬೆಂಗಳೂರು- ಮಂಗಳೂರು ಮಾರ್ಗ, ಹಾಸನ, ಸಕಲೇಶಪುರ ಶಿರಾಡಿಘಾಟ್ ಮುಂತಾದ ಕಡೆ ಭೇಟಿ ನೀಡಿರುವ ಸಚಿವರು ಹಾಸನ ಹೊರವರ್ತುಲ ರಸ್ತೆಯಲ್ಲಿ ಕಿರುಸೇತುವೆ ಪರಿಶೀಲಿಸಿ ಕಾಮಗಾರಿಯನ್ನು ಚುರುಕುಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದರು.

Home add -Advt

ಮಳೆ ಹಾನಿ ಪ್ರದೇಶಕ್ಕೆ ಸಿಎಂ ಭೇಟಿ; ನಾಳೆಯಿಂದ ಕರಾವಳಿ ಜಿಲ್ಲೆಗಳ ಪ್ರವಾಸ

Related Articles

Back to top button