
ಪ್ರಗತಿವಾಹಿನಿ ಸುದ್ದಿ; ಹಾಸನ: ಮಾಜಿ ಸಚಿವ ಹೆಚ್ ಡಿ ರೇವಣ್ಣನಿಂದಾಗಿ ಯುವಕರಿಗೆ ಹೆಣ್ಣು ಸಿಗುತ್ತಿಲ್ಲ ಎಂದು ಎ.ಮಂಜು ಗಂಭೀರ ಆರೋಪ ಮಾಡಿದ್ದಾರೆ.
ಹಾಸನದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ರೇವಣ್ಣ ವಿರುದ್ಧ ಆಕ್ರೋಶ ಹೊರಹಾಕಿದರು. ಮಾಜಿ ಸಚಿವ ಎ.ಮಂಜು, ಅವರು ಪೊಲೀಸರ ಮೂಲಕ ಕೇಸ್ ಹಾಕಿಸುತ್ತೇನೆ ಎಂದು ಹೆದರಿಸಿ ಪಕ್ಷ ಮತ್ತು ಮನೆಯನ್ನು ಸಂಘಟನೆ ಮಾಡಿಕೊಂಡಿದ್ದಾರೆ. ಹೊರತು ಪ್ರೀತಿಯಿಂದ ಜಿಲ್ಲೆಯನ್ನು ಹಿಡಿತದಲ್ಲಿ ಇಟ್ಟುಕೊಂಡಿಲ್ಲ ಎಂದರು.
ಯಾರಾದರೂ ಸತ್ತರೆ ರೇವಣ್ಣ ತನ್ನ ಸ್ವಂತ ಕಾರಲ್ಲಿ ಹೋಗಲ್ಲ. ಏನೋ ಮಂತ್ರ ಮಾಡಿಸಿಕೊಂಡು ಬಂದಿದ್ದಾರೆ ಅಂತ ಶರ್ಟ್ ಗುಂಡಿ ಬಿಚ್ಚಿಕೊಂಡು ಏಲಕ್ಕಿ ಹಾರ ತೋರಿಸ್ತಾನೆ. ಅವರು ಮಾಡಿರುವ ಕೆಲಸದಿಂದ ಹಿಂದೆ ಮುಂದೆ ಪೊಲೀಸ್ ಇಲ್ಲದೇ ಅವರಿಗೆ ಊರಿಗೆ ಬರಲು ಆಗಲ್ಲ. ಇದು ಹೀಗೆ ಮುಂದುವರೆದರೆ ಒಂದು ದಿನ ಜನ ಅವರಿಗೆ ಪಾಠ ಕಲಿಸುತ್ತಾರೆ ಎಂದು ಹೇಳಿದರು.
ರೇವಣ್ಣನಿಂದ ಈ ಭಾಗದಲ್ಲಿ ಯುವಕರಿಗೆ ಹೆಣ್ಣು ಸಿಗದಂತಾಗಿದೆ. ಅವರ ಜೊತೆ ಸೇರಿ ಆ ಕೇಸ್, ಈ ಕೇಸ್ ಅಂತಾ ಆಗಿ ಯಾರೂ ಯುವಕರಿಗೆ ಹೆಣ್ಣು ಕೊಡುತ್ತಿಲ್ಲ. ಹೀಗಾಗಿ ಜನರಿಗೆ ಒಳ್ಳೆಯದಾಗಲು ನಮ್ಮ ಜೊತೆ ಬನ್ನಿ ಎಂದು ಎ.ಮಂಜು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ