
ಹಾಸನಾಂಬೆ ದರ್ಶನ ಪ್ರಸಕ್ತ ವರ್ಷ ಸಂಪನ್ನ
ಪ್ರಗತಿವಾಹಿನಿ ಸುದ್ದಿ; ಹಾಸನ: ಹಾಸನದ ಶಕ್ತಿ ದೇವತೆ ಪ್ರಸಿದ್ದ ಹಾಸನಾಂಬೆ ಉತ್ಸವಕ್ಕೆ ಇಂದು ತೆರೆ ಬಿದ್ದಿದೆ. ಪ್ರಸಕ್ತ ವರ್ಷ 14 ದಿನಗಳ ಕಾಲ ಹಾಸನಾಂಬೆ ದೇವಾಲಯದ ಗರ್ಭಗುಡಿ ಬಾಗಿಲು ತೆರೆದು ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಈವರ್ಷದ ದರ್ಶನ ಇಂದು ಮಧ್ಯಾಹ್ನ ಸಂಪನ್ನವಾಯಿತು.
ಪ್ರಸಕ್ತ ವರ್ಷದ ಹಾಸನಾಂಬೆ ದೇವಿ ದರ್ಶನಕ್ಕೆ ವಿದ್ಯುಕ್ತ ತೆರೆ ಬಿದ್ದಿದ್ದು, ಮುಂದಿನ ವರ್ಷ 9 ದಿನಗಳ ಕಾಲ ಹಾಸನಾಂಬೆ ದೇವಾಲಯದ ಬಾಗಿಲು ತೆರೆಯಲಾಗುವುದು ಎಂದು ಇದೇ ವೇಳೆ ಘೋಷಿಸಲಾಯಿತು.
ಜಿಲ್ಲಾ ಉಸ್ತುವಾರಿ, ಸಹಕಾರ ಸಚಿವ ಕೆ.ಎನ್.ರಾಜಣ್ಣ ಸಮ್ಮುಖದಲ್ಲಿ ಇಂದು ಮಧ್ಯಾಹ್ನ 12:23ಕ್ಕೆ ಹಾಸನಾಂಬೆ ದೇವಿಯ ಗರ್ಭಗುಡಿ ಬಾಗಿಲು ಬಂದ್ ಮಾಡಲಾಯಿತು. ಇದಕ್ಕೂ ಮುನ್ನ ಹಾಸನಾಂಬೆಗೆ ಮಾಡಲಾಗಿದ್ದ ಅಲಂಕಾರ ತೆರವು ಮಾಡಿ, ಪೂಜೆ ಸಲ್ಲಿ, ಕೊನೆ ಹಂತದಲ್ಲಿ ದೇವರ ದರ್ಶನ ಪಡೆದು ಬಾಗಿಲು ಮುಚ್ಚಲಾಯಿತು. ಬಳಿಕ ಗರ್ಭಗುಡಿಯ ಬಾಗಿಲಿಗೆ ಪೂಜೆ ಸಲ್ಲಿಸುವ ಮೂಲಕ ಬೀಗ ಹಾಕಲಾಯಿತು.
ಇದೇ ವೇಳೆ ಮುಂದಿನ ವರ್ಷ ಹಾಸನಾಂಬೆ ದೇವಾಲಯದ ಬಾಗಿಲನ್ನು ಅಕ್ಟೋಬರ್ 24ರಿಂದ ನವೆಂಬರ್ 4ರವರೆಗೆ ತೆರೆಯಲಾಗುವುದು. ಒಟ್ಟು 9 ದಿನಗಳ ಕಾಲ ಹಾಸನಾಂಬೆ ದರ್ಶನಕ್ಕೆ ಭಕ್ತರಿಗೆ ಅವಕಾಶ ನೀಡಲಾಗುತ್ತದೆ ಎಂದು ಪ್ರಕಟಿಸಲಾಯಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ