ಪ್ರಗತಿವಾಹಿನಿ ಸುದ್ದಿ; ಹಾಸನ: ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡು ಗೋವಾ ಟ್ರಿಪ್ ಹೋದ ಯುವಕ ಪ್ರಾವಸದಲ್ಲಿ ತನ್ನ ಇಚ್ಚೆಯಂತೆ ಯುವತಿ ನಡೆದುಕೊಂಡಿಲ್ಲ ಎಂಬ ಕಾರಣಕ್ಕೆ ಮದುವೆಯನ್ನೇ ನಿರಾಕರಿಸಿರುವ ಘಟನೆ ಹಾಸಾನದಲ್ಲಿ ನಡೆದಿದೆ.
ಚಿಕ್ಕಮಗಳೂರಿನ ಜನ್ನಾಪುರ ಚಿನ್ನಿಗ ಗ್ರಾಮದ ನಿಶ್ಚಿತ್ ಎಂಬಾತನ ಜೊತೆ ಎಂಜಿನಿಯರಿಂಗ್ ಮುಗಿಸಿದ್ದ ಯುವತಿಯ ನಿಶ್ಚಿತಾರ್ಥವಾಗಿತ್ತು. ನಿಶ್ಚಿತ್ ಬೆಂಗಳೂರಿನ ಕೋರಮಂಗಲದಲ್ಲಿ ಈ ಪ್ರಾಫಿಟ್ ಸಂಸ್ಥೆಯ ಮಾಲೀಕ ಎಂದು ಹೇಳಿಕೊಂಡಿದ್ದ. ಯುವತಿಯ ಪೋಷಕರು ಫೆ.14ರಂದು ಭರ್ಜರಿಯಾಗಿ ನಿಶ್ಚಿತಾರ್ಥ ಮಾಡಿದ್ದರು.
ಮದುವೆ ಮಾತುಅಕ್ತೆ ಬಳಿಕ ಯುವತಿ ಹಾಗೂ ಯುವಕ ಇಬ್ಬರೂ ಗೋವಾ ಟ್ರಿಪ್ ಹೋಗಿದ್ದಾರೆ. ಈ ವೇಳೆ ತಾನು ಹೇಳಿದಂತೆ ತನ್ನೊಂದಿಗೆ ಯುವತಿ ಇರಲಿಲ್ಲ ಎಂಬ ಕಾರಣ ಹೇಳಿ ಯುವಕ ಇದೀಗ ಮದುವೆ ಆಗುವುದಿಲ್ಲ ಎಂದಿದ್ದಾನೆ. ಕೆಲಸಬಿಟ್ಟು ಮದುವೆಗೆ ಸಿದ್ಧವಾಗಿದ್ದ ಯುವತಿ ಇದೀಗ ಯುವಕನ ನಿರ್ಧಾರ ಕೇಳಿ ಶಾಕ್ ಆಗಿದ್ದು, ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಇದರಿಂದ ನೊಂದ ಯುವತಿ ಪೋಷಕರು ಬೇಲೂರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ತಮಗೆ ನ್ಯಾಯ ಕೊಡಿಸುವಂತೆ ಮೊರೆ ಇಟ್ಟಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ