
ಪ್ರಗತಿವಾಹಿನಿ ಸುದ್ದಿ; ಹಾಸನ: ವೇಗವಾಗಿ ಬಂದ ಲಾರಿ ಹಾಸನಾಂಬೆ ದೇವಾಲಯದ ಸ್ವಾಗತ ಕಮಾನಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ವಾಗತ ಕಮಾನು ಭಗ್ನಗೊಂಡಿದ್ದು, ಮುರಿದು ಬಿದ್ದಿದೆ.
ಭಾರೀ ವಾಹನಗಳಿಗೆ ಸಂಚಾರ ನಿರ್ಬಂಧಿಸಿದ್ದರೂ ಚಾಲಕ ಏಕಾಏಕಿ ಲಾರಿ ನುಗ್ಗಿಸಿದ್ದಾನೆ. ಚಾಲಕನ ನಿಯಂತ್ರಣ ತಪ್ಪಿದ ಲಾರಿ ದೇವಾಲಯದ ಸ್ವಾಗತ ಕಮಾನಿಗೆ ಗುದ್ದಿದೆ.
ಸ್ವಾಗತ ಕಮಾನು ರಸ್ತೆಯಲ್ಲಿ ಮುರಿದು ಬಿದ್ದಿದ್ದು, ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆಯುಂಟಾಗಿತ್ತು.