Latest

ಆಂಧ್ರಪ್ರದೇಶದಲ್ಲಿ ಮಿತಿಮೀರಿದ ದ್ವೇಷ ರಾಜಕಾರಣ: ಪ್ರಜಾವೇದಿಕೆ ಕಟ್ಟಡ ನೆಲಸಮ

ಪ್ರಗತಿವಾಹಿನಿ, ಅಮರಾವತಿ :

ಆಂಧ್ರಪ್ರದೇಶದಲ್ಲಿ ದ್ವೇಷ ರಾಜಕಾರಣ ಮಿತಿಮೀರಿದ್ದು, ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ತಮ್ಮ ಮನೆಯ ಪಕ್ಕ ಕಟ್ಟಿಸಿಕೊಂಡಿದ್ದ ಸುಮಾರು 5 ಕೋಟಿ ರೂ. ವೆಚ್ಚದ ಪ್ರಜಾವೇದಿಕೆ ಕಟ್ಟಡವನ್ನು ನೆಲಸಮಗೊಳಿಸಲಾಗಿದೆ.

ಈ ಕಟ್ಟಡವನ್ನು ಅಕ್ರಮವಾಗಿ ಕಟ್ಟಲಾಗಿದೆ ಎಂದು ಆರೋಪಿಸಿ ಅದನ್ನು ನೆಲಸಮ ಮಾಡಲು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಆದೇಶಿಸಿದ್ದರು. ಟಿಡಿಪಿ ಇದರ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರುವುದಾಗಿ ಹೇಳಿತ್ತು.

ನದಿತಟದಲ್ಲಿರುವ ಸುಸಜ್ಜಿತ ಬಂಗಲೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಚಂದ್ರಬಾಬು ನಾಯ್ಡು ವಾಸವಿದ್ದಾರೆ. ಹೈದರಾಬಾದಿನಿಂದ ವಿಜಯವಾಡಕ್ಕೆ ರಾಜ್ಯ ಆಡಳಿತ ಕೇಂದ್ರ ಬದಲಾದ ಲಾಗಾಯ್ತೂ ಅವರು ಉಂಡವಳ್ಳಿ ಎಂಬಲ್ಲಿ ಸುಸಜ್ಜಿತ ಕಟ್ಟಡದಲ್ಲಿ ವಾಸವಿದ್ದಾರೆ. ಈ ಮನೆ  ಖಾಸಗಿ ವ್ಯಕ್ತಿಯದ್ದಾಗಿದ್ದು, ಹಿಂದಿನ ಸರ್ಕಾರ ಇದನ್ನು ಲೀಸಿಗೆ ತೆಗೆದುಕೊಂಡಿತ್ತು. ಇದನ್ನೇ ಚಂದ್ರಬಾಬು ನಾಯ್ಡು ಅವರ ಗೃಹಕಚೇರಿಯನ್ನಾಗಿ ಮಾಡಲಾಗಿತ್ತು.

Home add -Advt

‘ಪ್ರಜಾ ವೇದಿಕಾ’ ಎಂಬ ಸಭಾಂಗಣವನ್ನೂ ಚಂದ್ರಬಾಬು ನಾಯ್ಡು ಪಕ್ಕದಲ್ಲೇ ಕಟ್ಟಿಕೊಂಡಿದ್ದರು. ಈ ಕಟ್ಟಡವನ್ನು ಅಕ್ರಮವಾಗಿ ಕಟ್ಟಲಾಗಿರುವ ಕಾರಣ ಚಂದ್ರಬಾಬು ನಾಯ್ಡು ವಾಸವಿದ್ದ ನಿವಾಸದ ಪ್ರಜಾ ವೇದಿಕೆ ಸಭಾಂಗಣದ ಭಾಗವನ್ನು ನೆಲಸಮ ಮಾಡುವಂತೆ ಸರ್ಕಾರ ಆದೇಶಿಸಿತ್ತು.

 ನಾಯ್ಡು ಕುಟುಂಬಕ್ಕೆ ನೀಡಲಾಗಿದ್ದ ಭದ್ರತೆಯನ್ನೂ ಸರ್ಕಾರ ಮಂಗಳವಾರವಷ್ಟೇ ಹಿಂದಪಡೆದಿತ್ತು.

Related Articles

Back to top button