Karnataka News

*ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ: ಕುಟುಂಬದೊಂದಿಗೆ ರಾಜಿಪಂಚಾಯಿತಿ: ಕಾಮುಕ ಸೇರಿ ನಾಲ್ವರು ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ಸಂತ್ರಸ್ತೆಯ ಕುಟುಂಬದ ಜೊತೆ ರಾಜಿಪಂಚಾಯಿತಿ ನಡೆಸಿದ್ದ ಪ್ರಕರಣ ಸಂಬಂಧ ಕಾಮುಕ ಸೇರಿ ನಾಲ್ವರು ಆರೋಪಿಗಳನ್ನು ಹಾವೇರಿಯಲ್ಲಿ ಬಂಧಿಸಲಾಗಿದೆ.

ಇಲ್ಲಿನ ಶಿಗ್ಗಾಂವಿ ತಾಲೂಕಿನ ಬಂಕಾಪುರ ಬಳಿ ಈ ಘಟನೆ ನಡೆದಿದೆ. ಸದ್ಯ ಪೊಲೀಸರು ಕಾಮುಕ ಸೇರಿ ನಾಲ್ವರನ್ನು ಬಂಧಿಸಿದ್ದಾರೆ. ಗೋಣಿರುದ್ರಾ ಶಿಗ್ಗಟ್ಟಿ (24), ಮಂಜುನಾಥ್ ಶಿಗ್ಗಟ್ಟಿ (23), ಲಕ್ಷ್ಮಣ ಕಬನೂರ್, ಮಾರುತಿ ಬಂಧಿತ ಆರೋಪಿಗಳು.

ಬಂಧಿತರಲ್ಲಿ ಮೂವರು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ. ಮತ್ತೋರ್ವ ಸಂತ್ರಸ್ತೆಯ ಕುಟುಂಬದವರ ಜೊತೆ ರಾಜೀಪಂಚಾಯಿತಿ ಮಾಡಿಸಿದ್ದನಂತೆ. ಬಂಕಾಪುರ ಠಾಣೆಯಲ್ಲಿ ಪೊಕ್ಸೋ ಕೇಸ್ ದಾಖಲಾಗಿತ್ತು. ಸದ್ಯ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button