Latest

ರಾಜವಂಶಸ್ಥ ಯದುವೀರ್ ಒಡೆಯರ್ ಹೆಸರಲ್ಲಿ ನಕಲಿ ಟ್ವಿಟರ್ ಖಾತೆ

ಪ್ರಗತಿವಾಹಿನಿ ಸುದ್ದಿ; ಮೈಸೂರು: ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೆಸರಲ್ಲಿ ಕಿಡಿಗೇಡಿಗಳು ನಕಲಿ ಟ್ವಿಟರ್ ಖಾತೆ ತೆರೆದಿದ್ದು, ಈ ಕುರಿತು ಯದುವೀರ್ ದೂರು ದಾಖಲಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಯದುವೀರ್ ಒಡೆಯರ್, ನನ್ನ ಹೆಸರು ಹಾಗೂ ಭಾವಚಿತ್ರ ಬಳಸಿ ಖಾತೆ ತೆರೆದಿದ್ದಾರೆ. ಅವರೇ ಪೋಸ್ ಸಹಾ ಮಾಡಿದ್ದಾರೆ. ಇದಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ಈ ಬಗ್ಗೆ ನಾನು ದೂರು ದಾಖಲಿಸಿದ್ದೇನೆ ಎಂದರು.

ಪದೇ ಪದೇ ಹೀಗೆ ನಕಲಿ ಖಾತೆ ಸೃಷ್ಟಿ ಮಾಡಲಾಗುತ್ತಿದೆ. ಇದು ನನ್ನ ಖಾತೆ ಎಂದು ಯಾರೂ ನಂಬಬೇಡಿ ಎಂದು ತಿಳಿಸಿದ್ದಾರೆ.

Home add -Advt

Related Articles

Back to top button