Latest

ಶಿರಸಿಯಲ್ಲಿ ಗಾಳಿ, ಮಳೆಯ ಅಬ್ಬರ ; ಕಂಗೆಟ್ಟ ಜಾತ್ರೆ ಪೇಟೆ (ವಿಡೀಯೋ ಸಹಿತ ಸುದ್ದಿ)

 

 

ಪ್ರಗತಿ ವಾಹಿನಿ ಸುದ್ದಿ ಶಿರಸಿ:

ಶಿರಸಿಯಲ್ಲಿ ಭಾರಿ ಮಳೆ ಗಾಳಿಯಾಗುತ್ತಿದ್ದು ಜಾತ್ರೆಯ ಉತ್ಸಾಹಕ್ಕೆ ಭಂಗ ತಂದಿದೆ.

ಮಾ.೧೫ರಿಂದ ರಾಜ್ಯದ ಪ್ರಸಿದ್ಧ ಶಿರಸಿ ಮಾರಿಕಾಂಬಾ ಜಾತ್ರೆ ವಿದ್ಯುತಕ್ತವಾಗಿ ಪ್ರಾರಂಭಗೊಂಡಿದೆ. ಮಾ.೧೬ರಂದು ದೇವಿಯು ಗದ್ದುಗೆಗೆ ಬಂದು ವಿರಾಜಮಾನಳಾಗಿದ್ದಾಳೆ. ಕೋವಿಡ್‌ನಿಂದಾಗಿ ಸಂಕಷ್ಟದಲ್ಲಿದ್ದ ಜನಕ್ಕೆ ಶಿರಸಿ ಜಾತ್ರೆ ಜೀವನೋತ್ಸಾಹವನ್ನು ತುಂಬಿದೆ ಎಂದರೆ ತಪ್ಪಾಗಲಾರದು.

ಆದರೆ ಶುಕ್ರವಾರ ಮಧ್ಯಾಹ್ನದ ಬಳಿಕ ಏಕಾಏಕಿ ಭಾರಿ ಮಳೆಯಾಗುತ್ತಿರುವುದಲ್ಲದೆ ಜೋರಾದ  ಗಾಳಿಯೂ ಬೀಸತೊಡಗಿದೆ. ಶುಕ್ರವಾರ ದೇವಿಯ ದಿನವಾಗಿರುವ ಹಿನ್ನೆಲೆಯಲ್ಲಿ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳ ಭಕ್ತರೂ ಲಕ್ಷಾಂತರ ಸಂಖ್ಯೆಯಲ್ಲಿ ಜಾತ್ರೆ ಬಂದಿದ್ದಾರೆ. ಆದರೆ ಮಳೆ ಗಾಳಿಯ ರಭಸಕ್ಕೆ ಜಾತ್ರೆ ಪೇಟೆಯಲ್ಲಿ ಜನ ಸಿಲುಕಿಕೊಂಡಿದ್ದು ಅಲ್ಲಲ್ಲಿ ಅಂಗಡಿ ಮುಂಗಟ್ಟುಗಳ ಕೆಳಗೆ ಆಶ್ರಯ ಪಡೆಯುವಂತಾಗಿದೆ.

ಕಳೆದ ೨೦೨೦ರಲ್ಲಿ ಜಾತ್ರೆಯ ಅಂತಿಮ ದಿನಗಳಲ್ಲಿ ಕೋವಿಡ್ ಅಪ್ಪಿಳಿಸಿದ್ದಂರಿಂದ ಸಾವಿರಾರು ರೂ. ಬಾಡಿಗೆ ನೀಡಿ ಜಾತ್ರೆ ಪೇಟೆಯಲ್ಲಿ ಅಂಗಡಿ ಪಡೆದಿದ್ದವರು ನಷ್ಟ ಅನುಭವಿಸಿದ್ದರು. ಈ ಬಾರಿಯ ಜಾತ್ರೆಯಲ್ಲಿ ನಷ್ಟ ಸರಿದೂಗಿಸಿಕೊಳ್ಳುವ ಉತ್ಸಾಹದಲ್ಲಿ ಅಂಗಡಿ ಹಾಕಿದ್ದಾರೆ. ಆದರೆ ಅಕಾಲಿಕ ಮಳೆ ಇವರೆಲ್ಲರ ವ್ಯಾಪಾರದ ಆಸೆಗೆ ತಣ್ಣೀರೆರಚಿದೆ.

ಬಟ್ಟೆ ಬರೆಗಳ ಅಂಗಡಿ, ಬೆಡ್‌ಶೀಟ್, ಬ್ಯಾಗ್ ವ್ಯಾಪಾರಿಗಳು ಮಾರಲು ತಂದಿದ್ದ ಸಾಮಗ್ರಿಗಳು ಮಳೆಗೆ ತೋಯ್ದು ತೊಪ್ಪೆಯಾಗುತ್ತಿವೆ. ಸಿಹಿ ತರಿನಿಸುಗಳು ಮಳೆಯಲ್ಲಿ ಕೊಚ್ಚಿ ಹೋಗುತ್ತಿವೆ. ಜಾತ್ರೆ ಪೇಟೆಯಲ್ಲಿ ಮಳೆ ಗಾಳಿಯ ಅಬ್ಬರಕ್ಕೆ ಜನ ಅಕ್ಷರಶಃ ನಲುಗಿಹೋಗುತ್ತಿದ್ದಾರೆ.

ದಿ ಕಾಶ್ಮೀರ್ ಫೈಲ್ಸ್ ಚಿತ್ರ ಕನ್ನಡಕ್ಕೂ ಡಬ್ ಆಗುವ ಸಾಧ್ಯತೆ

ಶಿರಸಿ ಮಾರಿಕಾಂಬಾ ಜಾತ್ರೆ ಆರಂಭ: ಎಲ್ಲೆಲ್ಲಿದೆ ಪಾರ್ಕಿಂಗ್ ವ್ಯವಸ್ಥೆ? ; ಪೊಲೀಸರ ಈ ಸೂಚನೆ ಗಮನಿಸಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button