
ಪ್ರಗತಿವಾಹಿನಿ ಸುದ್ದಿ; ದಾವೋಸ್: ದಾವೋಸ್ ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಶೃಂಗ ಸಭೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಯೋಜಿಸಿದ್ದ ಬೆಳಗಿನ ಉಪಾಹಾರದ ಸಭೆಯಲ್ಲಿ ವಿವಿಧ ಕಂಪನಿಗಳ ಮುಖ್ಯಸ್ಥರು ಹಾಗೂ ಅನಿವಾಸಿ ಭಾರಾತೀಯ ಉದ್ಯಮಿಗಳು ಭಾಗವಹಿಸಿದ್ದರು.
ಈ ಸಭೆಯಲ್ಲಿ ಅಮೆರಿಕಾದ ಇಂಡಿಯಾಸ್ಪೊರಾದ ಸಂಸ್ಥಾಪಕ ಎಂ. ಆರ್. ರಂಗಸ್ವಾಮಿ, ಸಿಂಗಾಪುರದ ಇಂಡೊರಮಾ ದ ಅಧ್ಯಕ್ಷ ಪ್ರಕಾಶ್ ಲೋಹಿಯಾ, ಹಿಟಾಚಿ ಜಪಾನ್ ನ ವ್ಯವಸ್ಥಾಪಕ ನಿರ್ದೇಶಕ ಭರತ್ ಕೌಶಲ್, ಯು ಎ ಇ ಯ ವಿಪಿಎಸ್ ಹೆಲ್ತ್ ಕೇರ್ ನ ಅಧ್ಯಕ್ಷ ಶಂಶೀರ್ ವಲಯಿಲ್, ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಐಟಿ ಬಿಟಿ, ಉನ್ನತ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ, ಕೈಗಾರಿಕಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ.ವಿ. ರಮಣ ರೆಡ್ಡಿ, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ಕೈಗಾರಿಕಾ ಇಲಾಖೆ ಆಯುಕ್ತರಾದ ಗುಂಜನ್ ಕೃಷ್ಣ ಉಪಸ್ಥಿತರಿದ್ದರು.
ಬೆಂಗಳೂರಿನಲ್ಲಿ ಐಕಿಯ ಸ್ಟೋರ್: ಜೆಸ್ಪರ್ ಬ್ರಾಡಿನ್ ರಿಂದ ಉದ್ಘಾಟನೆ