
ಪ್ರಗತಿವಾಹಿನಿ ಸುದ್ದಿ: ನಾಪತ್ತೆ ದೂರು ದಾಖಲಿಸಲು ತೆರಳಿದ ವ್ಯಕ್ತಿಯಲ್ಲಿ ಎಫ್ ಐಆರ್ ಮಾಡಲು ಪೇಪರ್ ತರಿಸಿದ ಕನಕಗಿರಿ ಪೊಲೀಸ್ ಠಾಣೆಯ ಹೆಡ್ ಕಾನ್ ಸ್ಟೇಬಲ್ ನನ್ನು ಸಸ್ಪೆಂಡ್ ಮಾಡಲಾಗಿದೆ.
ಅರಳಹಳ್ಳಿ ನಿವಾಸಿಯೋರ್ವರು ತನ್ನ ಮಗಳು ನಾಪತ್ತೆಯಾಗಿರುವ ಬಗ್ಗೆ ದೂರು ನೀಡಲು ಕನಕಗಿರಿ ಪೊಲೀಸ್ ಠಾಣೆಗೆ ತೆರಳಿದ್ದರು. ಈ ವೇಳೆ ಹೆಡ್ ಕಾನಸ್ಟೇಬಲ್ ಪರುಶುರಾಮ ಎಂಬುವರು ದೂರುದಾರನಿಗೆ ಪೇಪರ್ ತರುವಂತೆ ಸೂಚಿಸಿದ್ದರು.
ಈ ಕುರಿತ ವಿಡಿಯೋ ಮಂಗಳವಾರ ವೈರಲ್ ಆಗಿತ್ತು. ಇದರ ಬೆನ್ನಲ್ಲೆ ಕೊಪ್ಪಳ ಜಿಲ್ಲಾ ವರಿಷ್ಠಾಧಿಕಾರಿ ರಾಮ ಲಕ್ಷ್ಮಣ ಅರಸಿದ್ದಿ ಅವರು ಪರಶುರಾಮ ಅವರನ್ನು ಅಮಾನತು ಮಾಡಿ ಆದೇಶಿಸಿದ್ದಾರೆ. ಅಲ್ಲದೆ ಠಾಣೆ ಮಟ್ಟದಲ್ಲಿ ಈ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸುವಂತೆ ಆದೇಶಿಸಲಾಗಿದೆ.




