Kannada NewsLatest

*ರಾಯಗಢದಲ್ಲಿ ಭೀಕರ ಭೂಕುಸಿತ; ಸಾವಿನ ಸಂಖ್ಯೆ 22ಕ್ಕೆ ಏರಿಕೆ*

ಪ್ರಗತಿವಾಹಿನಿ ಸುದ್ದಿ; ರಾಯಗಢ; ಮಹಾರಾಷ್ಟ್ರದ ರಾಯಗಢದಲ್ಲಿ ಭೂಕುಸಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 22ಕ್ಕೆ ಏರಿಕೆಯಾಗಿದೆ.

ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗುತ್ತಿದ್ದು, ಹಲವೆಡೆ ಭೂಕುಸಿತ ಸಂಭವಿಸುತ್ತಿದೆ. ರಾಯಗಢದ ಖಲಾಪುರ್ ತಹಶಿಲ್ ನ ಇರ್ಶಲವಾಡಿ ಗ್ರಾಮದಲ್ಲಿ ಸಂಭವಿಸಿದ ಭೀಕರ ಭೂ ಕುಸಿತದಲ್ಲಿ ಈವರೆಗೆ 22 ಜನರು ಸಾವನ್ನಪ್ಪಿದ್ದಾರೆ. ಅವಶೇಷಗಳ ಅಡಿಯಲ್ಲಿ ಸಿಲುಕಿದವರ ರಕ್ಷಣಾ ಕಾರಾಚರಣೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭೂಕುಸಿತದಲ್ಲಿ 86 ಜನರು ನಾಪತ್ತೆಯಾಗಿದ್ದು, ಅವರ ಬಗ್ಗೆ ಇನ್ನೂ ಪತ್ತೆಯಾಗಿಲ್ಲ. ಭಾರಿ ಮಳೆಯಿಂದಾಗಿ ನಿನ್ನೆ ರಕ್ಷಣಾ ಕಾರ್ಯಾಚಹ್ರಣೆಗೆ ಅಡ್ಡಿಯಾಗಿತ್ತು. ಇಂದು ನಾಲ್ಕು ಎನ್ ಡಿ ಆರ್ ಎಫ್ ತಂಡಗಳಿಂದ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಈ ಭಾಗದಲ್ಲಿ 48 ಕುಟುಂಬಗಳು ವಾಸವಾಗಿದ್ದವು. 17 ಮನೆಗಳು ಭೂ ಕುಸಿತದ ಅವಶೇಷಗಳಡಿ ಸಿಲುಕಿಕೊಂಡಿವೆ.


Home add -Advt

Related Articles

Back to top button