Kannada NewsKarnataka News

ಮೋದಿ ಜನ್ಮದಿನದ ನಿಮಿತ್ತ ಆರೋಗ್ಯ ತಪಾಸಣೆ ಶಿಬಿರ

ಮೋದಿ ಜನ್ಮದಿನದ ನಿಮಿತ್ತ ಆರೋಗ್ಯ ತಪಾಸಣೆ ಶಿಬಿರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –  ಪ್ರಧಾನ ಮಂತ್ರಿ  ನರೇಂದ್ರ ಮೋದಿ ಅವರ ಹುಟ್ಟು ಹಬ್ಬದ ಅಂಗವಾಗಿ ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಕಂಗ್ರಾಳೆ ಕೆ.ಎಚ್. ಗ್ರಾಮದಲ್ಲಿ ಭಾರತೀಯ ಜನತಾ ಪಾರ್ಟಿ ಮಹಿಳಾ ಮೋರ್ಚಾ  ಹಾಗೂ ಕೇದಾರ ಹಾಸ್ಪಿಟಲ್ ಇವರ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಗ್ರಾಮದ ಜ್ಯೋತಿ ನಗರದ ವೈಭವ ಹಾಲ್‌ನಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಸಂಜಯ ಪಾಟೀಲ ಇವರು ಈ ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡುತ್ತಾ ಇಂತಹ ಶಿಭಿರಗಳನ್ನು ಆಯೋಜಿಸುವುದರಿಂದ ಗ್ರಾಮೀಣ ಪ್ರದೇಶದ ಬಡಜನರಿಗೆ ಬಹಳ ಅನುಕೂಲವಾಗುತ್ತದೆ, ಯುವಕರು ಮುಂದೆ ಬಂದು ರಕ್ತದಾನ, ಮಧುಮೇಹ ಚಿಕಿತ್ಸೆ, ನೇತ್ರ ಚಿಕಿತ್ಸೆಗಳಂತಹ ಶಿಬಿರಗಳನ್ನು ಏರ್ಪಡಿಸಿ ಗ್ರಾಮೀಣ ಭಾಗದ ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ಕರೆ ನೀಡಿದರು.

ದೇಶವನ್ನು ಅತ್ಯಂತ ವೇಗವಾಗಿ ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿರುವ ಇಂತಹ ಆದರ್ಶಪ್ರಾಯರಾದ  ಪ್ರಧಾನಿ  ನರೇಂದ್ರ ಮೋದಿಯವರ ಹುಟ್ಟುಹಬ್ಬದ ಈ ಸಂದರ್ಭದಲ್ಲಿ ಅವರಿಗೆ ಶುಭಹಾರೈಸಿ ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಹಾಗೂ ದೇವರಲ್ಲಿ ಅವರ ಆರೋಗ್ಯ ಹಾಗೂ ಆಯಸ್ಸನ್ನು ವೃದ್ಧಿಸಲೆಂದು ಪ್ರಾರ್ಥಿಸೋಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ವುಮನ್ ಮೆಡಿಕಲ್ ಸೆಲ್ ನಿರ್ದೇಶಕಿ ಡಾ. ಸೋನಾಲಿ ಸರ್ನೋಬತ್,   ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಆರೋಗ್ಯದ ಬಗ್ಗೆ ಮಾರ್ಗದರ್ಶನ ನೀಡಿ, ಪ್ರಥಮೋಪಚಾರದ ಬಗ್ಗೆ ಮಾಹಿತಿ ನೀಡಿದರು, ಪ್ರತಿಯೊಬ್ಬರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ತಿಳಿಸಿದರು.

ಮಹಿಳಾ ರಾಜ್ಯಾಧ್ಯಕ್ಷೆ ಭಾರತಿ ಶೆಟ್ಟಿ, ಮಹಿಳಾ ಜಿಲ್ಲಾಧ್ಯಕ್ಷರಾದ  ಪ್ರೇಮಾ ಭಂಡಾರಿ, ಡಾ|| ಸಮೀರ ಸರ್ನೋಬತ್, ಪ್ರಧಾನ ಕಾರ್ಯದರ್ಶಿ ಪ್ರವೀಣ ಪಾಟೀಲ, ಬೆಳಗಾವಿ ಗ್ರಾಮೀಣ ಮಹಿಳಾ ಅಧ್ಯಕ್ಷೆ  ಜ್ಯೋತಿ ಕುಲಕರ್ಣಿ, ರಂಜನಾ ಕೋಲಕಾರ, ಮಹೇಶ್ವರಿ ಸೋಮನ್ನಾಚೆ, ಲೀನಾ ಟೋಪಣ್ಣವರ, ಶಿಲ್ಪಾ ಕೇಳಕರ, ವಿಷ್ಣು ಧರವಂದರ, ಮನೋಹರ ಬಾಕಳೂಕರ, ಪಿರಾಜಿ ಪಾಟೀಲ, ನಾರಾಯಣ ಥೋರವತ್, ದಿನೇಶ ಪಾಟೀಲ, ಶ್ರೀಧರ ಜಾಧವ, ಮಹಾದೇವ ಕಾಲಕುಂದ್ರಿಕರ, ಸೋಮನಾಥ ಜಾಧವ, ವಿಜಯ ಕಸಾಳಕರ, ಮಾರುತಿ ಜಾಧವ, ಸುರೇಶ ಪಾಟೀಲ, ಜಯಪ್ರಕಾಶ ಬೆಳಗಾಂವಕರ, ಚಂದು ದೇಸೂರಕರ, ಲಿಲಾವತಿ ಪಾಟೀಲ, ಕಾಂಚನಾ ಕಾಲಕುಂದ್ರಿಕರ, ಸುರೇಖಾ ನಟಕರ್ಣಿ, ಅನುಸೂಯಾ ಪಾಟೀಲ, ಅಪಾರ ಸಂಖ್ಯೆಯಲ್ಲಿ ಮಹಿಳೆಯರು, ಕಾರ್ಯಕರ್ತರು ಗ್ರಾಮಸ್ತರು ಪಾಲ್ಗೊಂಡಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button