Kannada NewsKarnataka NewsNationalPolitics

*ಇದೆ ತಿಂಗಳಲ್ಲಿ ಆಗಲಿದೆ ಸಚಿವ ಸಂಪುಟ ವಿಸ್ತರಣೆ*

ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ರಾಜ್ಯಭಾರ ಆರಂಭಿಸಿರುವ ನೂತನ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಇವರ ಜೊತೆ 13ಮಂದಿ ಸಚಿವರೂ ಕೂಡಾ ಪ್ರಮಾಣ ಸ್ವೀಕರಿಸಿದ್ದಾರೆ.

ಬರುವ ಜೂನ್ 18ರ ನಂತರ ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆ ಆಗಬಹುದು ಎಂಬ ರಾಜಕೀಯ ವಲಯಗಳಲ್ಲಿ ಮಹತ್ವದ ಚರ್ಚೆಗಳು ನಡೆಯುತ್ತಿವೆ. 

Home add -Advt

ಜೂನ್ 18ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಗಳ ನಂತರ, ಅಂದರೆ ಜೂನ್ ಮಧ್ಯಭಾಗದಲ್ಲಿ ಎರಡನೇ ಹಂತದ ಸಂಪುಟ ವಿಸ್ತರಣೆ ನಡೆಯಲಿದೆ ಎನ್ನಲಾಗಿದೆ. ಮೊದಲ ಪಟ್ಟಿಯಲ್ಲಿ ಸ್ಥಾನ ವಂಚಿತರಾದ ಹಿರಿಯ ನಾಯಕರು ಮತ್ತು ವಿವಿಧ ಜಿಲ್ಲೆಗಳ ಆಕಾಂಕ್ಷಿಗಳು ಸಚಿವ ಸ್ಥಾನಕ್ಕಾಗಿ ಕಾಯುತ್ತಿದ್ದಾರೆ. 

ಕರ್ನಾಟಕ ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿ ಸೇರಿದಂತೆ ಒಟ್ಟು 34 ಸ್ಥಾನಗಳಿಗೆ ಅವಕಾಶವಿದೆ. ಇವುಗಳಲ್ಲಿ ಈಗಾಗಲೇ 13 ಸ್ಥಾನಗಳು ಭರ್ತಿಯಾಗಿದ್ದು ಇನ್ನುಳಿದ 20 ಖಾತೆಗಳಿಗೆ ಸಚಿವರನ್ನು ಆಯ್ಕೆ ಮಾಡಬೇಕಿದೆ. 

ಎರಡನೆ ಹಂತದ ಈ ಸಂಪುಟ ವಿಸ್ತರಣೆಯಲ್ಲಿ ಯಾರಿಗೆಲ್ಲ ಅದೃಷ್ಟ ಒಲಿಯಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದ್ದು, ಸಚಿವ ಸ್ಥಾನ ಆಕಾಂಕ್ಷಿಗಳಲ್ಲಿ ಧಾವಂತ ಹೆಚ್ಚಾಗಿದೆ.

Related Articles

Back to top button