Latest

ವೃದ್ಧೆಯನ್ನು ಕೊಲೆಗೈದು ಕಬೋರ್ಡ್ ನಲ್ಲಿ ಶವವಿಟ್ಟು ಎಸ್ಕೇಪ್ ಆದ ಮಹಿಳೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವೃದ್ಧೆಯನ್ನು ಬರ್ಬರವಾಗಿ ಹತ್ಯೆಗೈದ ಮಹಿಳೆಯೊಬ್ಬಳು ಮೃತದೇಹವನ್ನು ಕಬೋರ್ಡ್ ನಲ್ಲಿ ಇಟ್ಟು ಪರಾರಿಯಾಗಿರುವ ಘಟನೆ ಬೆಂಗಳೂರಿನ ಹೊರವಲಯದ ಆನೇಕಲ್ ತಾಲೂಕಿನ ಅತ್ತಿಬೆಲೆ ಗ್ರಾಮದ ನೆರಳೂರಿನಲ್ಲಿ ನಡೆದಿದೆ.

ಪಾರ್ವತಮ್ಮ (80) ಕೊಲೆಯಾದ ವೃದ್ಧೆ. ಮನೆ ಬಾಡಿಗೆಗೆ ಇದ್ದ ಮಹಿಳೆ ಪಾಯಲ್ ವೃದ್ಧೆಯನ್ನು ಹತ್ಯೆಗೈದು ಎಸ್ಕೇಪ್ ಆಗಿದ್ದಾಳೆ ಎಂದು ಆರೋಪಿಸಲಾಗಿದೆ.

ಪಾರ್ವತಮ್ಮ ಮನೆಯ 3ನೇ ಮಹಡಿಯಲ್ಲಿ ತನ್ನ ಕುಟುಂಬದ ಜೊತೆ ವಾಸವಾಗಿದ್ದರು. ಕಳೆದ ಎರಡು ದಿನಗಳಿಂದ ಪಾರ್ವತಮ್ಮ ನಾಪತ್ತೆಯಾಗಿದ್ದರು. ಪರ್ವತಮ್ಮ ಅವರಿಗಾಗಿ ಕುಟುಂಬದವರು ಸಾಕಷ್ಟು ಹುಡುಕಾಟ ನಡೆಸಿದ್ದರೂ ಅವರ ಪತ್ತೆ ಇರಲಿಲ್ಲ. ಅಕ್ಕಪಕ್ಕದವರನ್ನು ಹಾಗೂ ಮನೆ ಬಾಡಿಗೆಗೆ ಇದ್ದವರನ್ನು ವಿಚಾರಿಸಿದಾಗ ಪಾಯಲ್ ಜೊತೆ ಎರಡು ದಿನಗಳ ಹಿಂದೆ ಮಾತನಾಡುತ್ತಿದ್ದರು. ಎರಡು ದಿನಗಳಿಂದ ಪಾಯಲ್ ಕೂಡ ಕಾಣಿಸುತ್ತಿಲ್ಲ ಎಂದು ಹೇಳಿದ್ದಾರೆ.

ನಾಲ್ಕನೇ ಮಹಡಿಯ ಮನೆಯಲ್ಲಿ ಪಾಯಲ್ ಬಾಡಿಗೆಗೆ ಇದ್ದಳು. ಆಕೆ ಮನೆಯ ಬಾಗಿಲು ತೆರೆದು ನೋಡಿದಾಗ ಮನೆ ಖಾಲಿ ಖಾಲಿಯಾಗಿದ್ದು, ಕಬೋರ್ಡ್ ನಲ್ಲಿ ವೃದ್ಧೆ ಪಾರ್ವತಮ್ಮ ಶವ ಪತ್ತೆಯಾಗಿದೆ. ವೃದ್ಧೆಯನ್ನು ಕೊಲೆಗೈದು ಕವರ್ ಸುತ್ತಿ ಕಬೋರ್ಡ್ ನಲ್ಲಿಟ್ಟು ಪಾಯಲ್ ಪರಾರಿಯಾಗಿದ್ದಾಳೆ ಎಂದು ವೃದ್ಧೆಯ ಕುಟುಂಬದವರು ಆರೋಪಿಸಿದ್ದಾರೆ.

Home add -Advt

ಯಾವ ಕಾರಣಕ್ಕಾಗಿ ವೃದ್ಧೆಯ ಹತ್ಯೆಯಾಗಿದೆ? ಪಾಯಲ್ ವೃದ್ಧ ಮಹಿಳೆಯನ್ನು ಕೊಲೆಗೈಯ್ಯಲು ಕಾರಣವಾದರೂ ಏನು? ಎಂಬುದು ತಿಳಿದುಬಂದಿಲ್ಲ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಪೊಲೀಸರು ಸಂಯಮದಿಂದ ವರ್ತಿಸಬೇಕು; ಶಾಸಕ ಸತೀಶ್ ಜಾರಕಿಹೊಳಿ ಸಲಹೆ

https://pragati.taskdun.com/satish-jarakiholigogate-collegekannada-flag-issuebelagavi/

Related Articles

Back to top button