ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ:
ಬಿಸಿಲಿನ ಬೇಗೆಯಿಂದ ತತ್ತರಿಸಿ ಹೋಗಿದ್ದ ಚಿಕ್ಕೋಡಿ ತಾಲೂಕಿನ ಜನ ನಿಟ್ಟುಸಿರು ಬಿಟ್ಟಿದ್ದಾರೆ.
ಚಿಕ್ಕೋಡಿ ತಾಲೂಕಿನ ಯಕ್ಸಂಬಾ, ಸದಲಗಾ, ಮಾಂಜರಿ, ಯಡೂರ, ಅಂಕಲಿ, ಚೆಂದೂರ, ಕಲ್ಲೋಳ ಮುಂತಾದ ಗ್ರಾಮಗಳಲ್ಲಿ ಭರ್ಜರಿ ಮಳೆ ಸುರಿದಿದೆ.
ರವಿವಾರ ಸಂಜೆ 4.30 ಕ್ಕೆ ಆರಂಭವಾದ ಮಳೆ 6.30 ರವರೆಗೆ ಸುಮಾರು ಎರಡು ಗಂಟೆಗಳ ಕಾಲ ರಭಸದಿಂದ ಮಳೆ ಸುರಿದಿದೆ. ಕಳೆದ ಎರಡು ದಿನಗಳಿಂದ ಬಿಸಿಲನ ತಾಪ ಹೆಚ್ಚಳವಾಗಿತ್ತು. ರವಿವಾರ ಸುರಿದ ಭಾರಿ ಮಳೆಯಿಂದ ಚಿಕ್ಕೋಡಿ ಗಡಿ ಭಾಗದ ಜನಕ್ಕೆ ತಂಪೇರಿದಂತಾಗಿದೆ.
ಪ್ರಸಕ್ತ ವರ್ಷದ ಬೇಸಿಗೆಯಲ್ಲಿ ಸುರಿಯಬೇಕಾಗಿದ್ದ ಅಡ್ಡ ಮಳೆ ಸುರಿಯದ ಕಾರಣ ಗಡಿ ಭಾಗದ ಜನ ತೀವ್ರ ಸಂಕಷ್ಟ ಪಟ್ಟಿದ್ದರು. ಆದರೆ ರವಿವಾರ ಸುರಿದ ಭಾರಿ ಮಳೆಯಿಂದ ಗಡಿ ಭಾಗದ ಜನ ಸಂತಸದಲ್ಲಿದ್ದಾರೆ.
ಬೇಸಿಗೆಯಲ್ಲಿ ಕೃಷ್ಣಾ ನದಿ ಬತ್ತಿ ಹೋಗಿ ನದಿ ಪಾತ್ರದ ಜನರಿಗೆ ಕುಡಿಯಲು ನೀರಿಲ್ಲದ ಪರಿಣಾಮ ತೀವ್ರ ತೊಂದರೆ ಅನುಭವಿಸಿದರು. ನದಿ ಪಾತ್ರದಲ್ಲಿ ಬೆಳೆದ ಕಬ್ಬು ನೀರಿಲ್ಲದೆ ಕಮರಿ ಹೋಗಿತ್ತು. ಇದೀಗ ಭರ್ಜರಿ ಮಳೆ ಸುರಿದಿರುವುದರಿಂದ ಕಬ್ಬಿನ ಬೆಳೆಗೆ ಅನುಕೂಲವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ