*ಮಳೆ ಗಾಳಿಗೆ ಧರೆಗುರುಳಿದ ವಿದ್ಯುತ್ ಕಂಬಗಳು, ಶಾಲಾ ಮೆಲ್ಚಾವಣೆಯ ತಗಡುಗಳು*


ಪ್ರಗತಿವಾಹಿನಿ ಸುದ್ದಿ,
ಸುರೇಬಾನ: ವರ್ಷದ ಮೊದಲ ಮಳೆ, ಗಾಳಿಗೆ ವಿದ್ಯುತ್ ಕಂಬಗಳು, ಶಾಲಾ ಮೆಲ್ಚಾವಣೆಯ ತಗಡುಗಳು ಧರೆಗುರುಳಿವೆ.
ಗುರುವಾರ ಸಂಜೆ ಏಕಾಏಕಿ ಮೋಡ ಕವಿದು ಮಳೆ ಪ್ರಾರಂಭವಾಗಿದ್ದು, ಒಂದು ಗಂಟೆಗೂ ಅಧಿಕ ಕಾಲ ಭಾರಿ ಮಳೆ ಸುರಿದಿದೆ.
ಶಾಲಾ ಮೇಲ್ಚಾವಣೆಯ ತಗಡುಗಳು ಹಾಳು: ಸಮೀಪದ ಶಿವಪೇಠ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಚಾವಣಿಯ ತಗಡುಗಳು ಗಾಳಿಯ ಹೊಡೆತಕ್ಕೆ ಕಿತ್ತು ರಸ್ತೆಯ ಮೇಲೆ ಬಿದ್ದಿವೆ.
ಗಿಡಗಳು, ವಿದ್ಯುತ್ ಕಂಬಗಳು ಸಹ ಬಿದ್ದಿದ್ದರಿಂದ ಭಾಗಷಃ ಹಾನಿಯಾಗಿವೆ.
ವಿದ್ಯುತ್ ವ್ಯಥೆ: ಗುರುವಾರ ಸುರಿದ ಮಳೆ ಹಾಗೂ ಗಾಳಿಗೆ ವಿದ್ಯುತ್ ಸಂಪೂರ್ಣ ವ್ಯತ್ಯಯವಾಗಿದ್ದರಿಂದ ಸುರೇಬಾನ ಸುತ್ತಮುತ್ತಲಿನ ಗ್ರಾಮಗಳಲ್ಲಿ ಏನೇನು ಅನಾಹುತಗಳಾಗಿವೆ ಎಂಬುದು ಇನ್ನೂ ತಿಳಿಯಬೇಕಿದೆ.
ಸುರೇಬಾನ – ಮನಿಹಾಳ ಅವಳಿ ಗ್ರಾಮಗಳಲ್ಲಿ ಚರಂಡಿ ನೀರು ನುಗ್ಗಿ ಅಂಗಡಿ ಮುಂಗಟ್ಟುಗಳಲ್ಲಿ ಬಹಳ ತೊಂದರೆಯಾಗಿದೆ ಎಂದು ವ್ಯಾಪಾರಸ್ಥರು ತಮ್ಮ ಅಳಲನ್ನು ತೋಡಿಕೊಂಡರು.
ರೈತರಿಗೆ ಆತಂಕ: ರೈತರ ಜಮೀನುಗಳಲ್ಲಿ ಕಡಲೆ, ಬಿಳಿಜೋಳ, ಗೋದಿ ಹಾಗೂ ಉಳ್ಳಾಗಡ್ಡಿಗಳ ರಾಶಿಗಳಿದ್ದು ಏಕಾಏಕಿ ಸುರಿದ ಭಾರಿ ಮಳೆಗೆ ರೈತರು ಕಂಗಾಲಾಗಿದ್ದಾರೆ.
ಒಂದೆಡೆ ಕೆಲ ಜನರು ಕಾಮಣ್ಣನನ್ನು ಸುಟ್ಟ ಮೇಲೆ ಬೂದಿಯನ್ನು ತೊಯಿಸಿದರೆ, ಮುಂದೆ ಮಳೆ, ಬೆಳೆ ಸಂಪಾಗುತ್ತವೆ ಎಂದು ಮಾತನಾಡುತ್ತಾರೆ.
ಬೇಸಗೆಯ ಬಿಸಿಲಿನ ಜಳಕ್ಕೆ ಕಂಗಾಲಾಗಿದ್ದ ಜನರಿಗೆ ಸ್ವಲ್ಪಮಟ್ಟಿಗೆ ತಂಪೆರೆದಂತಾಗಿದೆ.