ಪ್ರಗತಿವಾಹಿನಿ ಸುದ್ದಿ : ಬಂಗಾಳ ಕೊಲ್ಲಿಯಲ್ಲಿ ಹವಾಮಾನ ವೈಪರೀತ್ಯದ ಪರಿಣಾಮ ಪಶ್ಚಿಮ ಕಡಲ ತಡಿಗೆ ಪೂರ್ವ ಸಮುದ್ರದ ಚಂಡಮಾರುತ ಎಫೆಕ್ಟ್ ತಟ್ಟಿದೆ. ಕರಾವಳಿ ಜಿಲ್ಲೆ ಉಡುಪಿಯ ಹಲವೆಡೆ ಧರಾಕಾರ ಮಳೆಯಾಗಿದ್ದು, ಕಾರ್ಕಳ, ಹೆಬ್ರಿ -ಕಾಪು, ಉಡುಪಿಯ ಹಲವೆಡೆ ಜೋರು ಮಳೆಯಾಗಿದೆ.
ಕಾರ್ಕಳ -ಹೆಬ್ರಿಯಲ್ಲಿ ಮಿಂಚು ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ. ಉಡುಪಿ, ಕಾಪು ತಾಲೂಕಿನಲ್ಲಿ ಕೆಲಕಾಲ ಸಾಧಾರಣ ಮಳೆಯಾಗಿದೆ. ಇನ್ನೂ ಎರಡು ದಿನಗಳ ಮಳೆ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಅನಿರೀಕ್ಷಿತ ಮಳೆಯಿಂದ ಸಂಕ್ರಾಂತಿ ಉತ್ಸವಕ್ಕೆ ಮಳೆರಾಯ ತೊಡಕುಂಟು ಮಾಡಿದ್ದಾನೆ. ಉಡುಪಿ ಶ್ರೀ ಕೃಷ್ಣ ಮಠದ ರಥೋತ್ಸವಕ್ಕೂ ಕೂಡ ಮಳೆಯಿಂದ ಅಡ್ಡಿಯಾಗಿದೆ. ಉತ್ಸವದ ವೇಳೆಯಲ್ಲಿ ಗುಡುಗು ಮಿಂಚು ಸಹಿತ ಮಳೆಯಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ