Uncategorized

*ಅಂಡರ್ ಪಾಸ್ ನಲ್ಲಿ ಕಾರು ಮುಳುಗಿದ ಪ್ರಕರಣ; ಅಸ್ವಸ್ಥಗೊಂಡಿದ್ದ ಯುವತಿ ಸಾವು*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ವರುಣಾರ್ಭಟಕ್ಕೆ ಯುವತಿಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಮಹಾಮಳೆಯಿಂದಾಗಿ ಕೆ.ಆರ್.ಸರ್ಕಲ್ ಅಂಡರ್ ಪಾಸ್ ನಲ್ಲಿ ಕಾರು ಮುಳುಗಡೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವನ್ಮರಣದ ನಡುವೆ ಹೋರಾಟ ನಡೆಸಿದ್ದ ಯುವತಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

Home add -Advt

ಇನ್ಫೋಸಿಸ್ ಉದ್ಯೋಗಿಯಾಗಿದ್ದ 22 ವರ್ಷದ ಭಾನುರೇಖಾ ಮೃತ ಯುವತಿ. ವಿಜಯವಾಡ ಮೂಲದ ಕುಟುಂಬ ರಜೆ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಬಂದಿತ್ತು. ಈ ವೇಳೆ ಮಳೆ ಅವಾಂತರದಲ್ಲಿ ಸಿಲುಕಿಕೊಂಡು ದುರಂತ ಸಂಭವಿಸಿದೆ.

ಭಾನುರೇಖಾ ಸೇರಿದಂತೆ ಕುಟುಂಬದ ಒಟ್ಟು 6 ಜನರು ಕಾರಿನಲ್ಲಿ ತೆರಳುತ್ತಿದ್ದಾಗ ಬಿರುಗಾಳಿ ಮಳೆಗೆಯಿಂದಾಗಿ ಕೆ.ಆರ್.ಸರ್ಕಲ್ ನ ಅಂಡರ್ ಪಾಸ್ ಏಕಾಏಕಿ ಜಲಾವೃತಗೊಂಡು ಕಾರು ಮುಳುಗಡೆಯಾಗಿದೆ. ತಕ್ಷಣ ಸ್ಥಳೀಯರು ಹಾಗೂ ಪೊಲೀಸರು ಕಾರಿನಲ್ಲಿ ಸಿಲುಕಿದ್ದ ನಾಲ್ವರನ್ನು ರಕ್ಷಿಸಿದ್ದಾರೆ. ಇನ್ನಿಬ್ಬರಿಗಾಗಿ ಶೋಧಕಾರ್ಯ ಮುಂದುವರೆದಿದೆ.

ನೀರಿನಲ್ಲಿ ಸಿಲುಕಿದ್ದ ಯುವತಿ ಭಾನುರೇಖಾ ತೀವ್ರಾಸ್ವಸ್ಥಗೊಂಡಿದ್ದರಿಂದ ಸೆಂಟ್ ಮಾರ್ಥಾಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಯುವತಿ ಕೊನೆಯುಸಿರೆಳೆದಿದ್ದಾರೆ.

https://pragati.taskdun.com/karnatakabangaloreheavy-raink-r-circlefamily-resque/


Related Articles

Back to top button