ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಶಹಾಪುರದ ಹೊಸುರ ಹರಿಜನವಾಡಾದಲ್ಲಿ ಸಾರ್ವಜನಿಕರ ಸ್ಥಳದಲ್ಲಿ ಓಸಿ ಮಟಕಾ ಆಡುತ್ತಿದ್ದ ಇಬ್ಬರನ್ನು ಬಂಧಿಸಿರುವ ಪೊಲೀಸರು 1,13,920 ರೂ. ವಶಪಡಿಸಿಕೊಂಡಿದ್ದಾರೆ.
ಅಪರಾಧ ವಿಭಾಗದ ಎಸಿಪಿ ಮಹಾಂತೇಶ್ವರ ಜಿದ್ದಿ ಮತ್ತು ಮಾರ್ಕೆಟ್ ಎಸಿಪಿ ನಾರಾಯಣ ಬರಮನಿ ನೇತೃತ್ವದಲ್ಲಿ, ಅನೀಲ ಪಾಟೀಲ, ಎಸ್ ಬಿ ಪಾಟೀಲ, ನವೀನಕುಮಾರ ಎ ಬಿ ಹಾಗೂ ಮಹೇಶ ಕೌಜಲಗಿ ದಾಳಿ ನಡೆಸಿದರು.
ವಿನೋದ ಮೋಹನ ಮ್ಯಾಗಿನಮನಿ ಸಾ. ಹರಿಜನವಾಡಾ, ಶಹಾಪೂರ ಹಾಗೂ ಪ್ರಮೋದ ಮೋಹನ ಧಾಮನೇಕರ ಸಾ. ಬಾಂದೂರ ಗಲ್ಲಿ ಬೆಳಗಾವಿ ಬಂಧಿತರು.