Kannada NewsKarnataka NewsLatestPolitics

*ಶಿವರಾಮ ಹೆಬ್ಬಾರ್ ಕಾಂಗ್ರೆಸ್ ಸೇರುತ್ತಾರಾ?*

ಪ್ರಗತಿವಾಹಿನಿ ಸುದ್ದಿ; ಶಿರಸಿ: ಬಾಂಬೇ ಟೀಮ್ ಕಾಂಗ್ರೆಸ್ ಗೆ ಮರಳೋ ವಿಚಾರಕ್ಕೆಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ, ಶಾಸಕ ಶಿವರಾಮ್ ಹೆಬ್ಬಾರ್, ನಾನು ಮಧ್ಯಮ ನೋಡಿ ಇವತ್ತು ತಿಳ್ಕೊಂಡಿದ್ದೇನೆ. ಯಾಕೆ ಮಾಧ್ಯಮದಲ್ಲಿ ಹೀಗೆ ಬಂದಿದೆ ಗೊತ್ತಿಲ್ಲ ಎಂದಿದ್ದಾರೆ.

ಶಿರಸಿಯಲ್ಲಿ ಮಾತನಾಡಿದ ಶಸಕರು, ನಾನು ಯಾವುದೇ ಸಭೆ, ಸಮಾರಂಭ ಅಥವಾ ಚರ್ಚೆ ಚಟುವಟಿಕೆಗಳಲ್ಲಿ ಭಾಗವಹಿಸಿಲ್ಲ. ಅಂತಹ ಪರಿಸ್ಥಿತಿ ಬಂದಾಗ ಕ್ಷೇತ್ರದ ಜನರನ್ನ ಬಿಟ್ಟು ರಾಜಕಾರಣ ಮಾಡೋಕಾಗಲ್ಲ. ಅಂತಿಮವಾಗಿ ನಮ್ಮ ಹಣೆಬರಹ ಬರೆಯೋದು ಕ್ಷೇತ್ರದ ಜನಾನೇ. ಅದು ಆವತ್ತು, ಇವತ್ತು ಅಥವಾ ಮುಂದೇನೂ ಇರ್ಬಹುದು. ಪ್ರಮುಖವಾದ ಯಾವುದೇ ನಿರ್ಣಯವನ್ನ ಕ್ಷೇತ್ರದಲ್ಲಿ ಚರ್ಚೆ ಮಾಡದೇ ಮಾಡೋಕಾಗಲ್ಲ ಎಂದು ತಿಳಿಸಿದ್ದಾರೆ.

ನನಗೆ ಅಂತಹ ಕಾಲನಿರ್ಣಯ ಆಗಿಲ್ಲ, ನಿರ್ಮಾಣವೂ ಆಗಿಲ್ಲ. ಹಾಗಾಗಿ ‘ರೇ’ ಅನ್ನೋದಕ್ಕೆ ಉತ್ತರ ಕೊಡೋ ಅವಶ್ಯಕತೆ ಇಲ್ಲ ಎಂದರು.

Home add -Advt

ರಾಜ್ಯದ ಹಲವಾರು ಜಿಲ್ಲೆಗಳನ್ನ ಬರಪೀಡಿತ ಅಂತ ಘೋಷಣೆ ಮಾಡ್ಬೇಕು. ಕುಡಿಯುವ ನೀರಿಗೆ ಈಗಾಗ್ಲೇ ತೊಂದರೆ ಅನುಭವಿಸೋ ಕಾಲಘಟ್ಟಕ್ಕೆ ಬಂದಿದ್ದೇವೆ. ವಾಸ್ತವಿಕ ಮಳೆಗಿಂತ 62 ಪ್ರತಿಶತ ಮಳೆ ಕಡಿಮೆಯಾಗಿದೆ. ಅನೇಕ ರೈತರು ಬಿತ್ತಿದ ಬೆಳೆಗಳೆಲ್ಲ ಹಾನಿಯಾಗಿದೆ. ರಾಜ್ಯ ಸರ್ಕಾರ ಬೆಳೆಗೆ ಸೂಕ್ತ ಪರಿಹಾರ ಕೊಡ್ಬೇಕು. ವಿಪುಲವಾದ ಬೀಜಗಳ ಪೂರೈಕೆ ಆಗ್ಬೇಕು. ಕುಡಿಯುವ ನೀರಿನ ಬಗ್ಗೆ ಸರ್ಕಾರ ಕೂಡಲೇ ಗಂಭೀರವಾದ ಕ್ರಮಗಳನ್ನ ಕೈಗೊಳ್ಬೇಕು. ಪ್ರತಿ ಕ್ಷೇತ್ರಕ್ಕೆ 1 ಕೋಟಿ ರೂಪಾಯಿ ಕುಡಿಯುವ ನೀರಿನ ಪರಿಹಾರಕ್ಕಾಗಿ ಘೋಷಿಸಬೇಕು. ಇದರಿಂದ ಜನರಲ್ಲಿರೋ ಆತಂಕ ದೂರವಾಗಬೇಕಿದೆ ಎಂದು ಹೇಳಿದರು.

Related Articles

Back to top button