Latest

ಬೆಂಗಳೂರಲ್ಲಿ ಭಾರಿ ಮಳೆ: 14 ವಿಮಾನಗಳ ಮಾರ್ಗ ಬದಲಾವಣೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಮಂಗಳವಾರ ಮಧ್ಯಾಹ್ನ ನಂತರ ಬೆಂಗಳೂರಿನಲ್ಲಿ ಭಾರಿ ಮಳೆಯಾಗಿದ್ದರಿಂದ ವಾಹನ ಸಂಚಾರವಷ್ಟೇ ಅಲ್ಲ, ವಿಮಾನಗಳ ಸಂಚಾರಕ್ಕೂ ಅಡಚಣೆಯಾಯಿತು. ಇದರಿಂದಾಗಿ 14 ವಿಮಾನಗಳನ್ನು ಮಾರ್ಗ ಬದಲಾಯಿಸಿ ಬೇರೆಡೆ ಕಳಿಸಲಾಯಿತು.

ದೇವನಹಳ್ಳಿ ಹಾಗೂ ಕೇಂಪೇಗೌಡ ವಿಮಾನ ನಿಲ್ದಾಣ ಭಾಗದಲ್ಲಿ ಧಾರಕಾರ ಮಳೆಯಾಗುತ್ತಿರುವ ಹಾಗೂ ಜೋರಾಗಿ ಗಾಳಿ ಬೀಸುತ್ತಿರುವ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣಕ್ಕೆ ಬರಬೇಕಿದ್ದ 14 ವಿಮಾನಗಳನ್ನು ಚೆನ್ನೈ, ಕೊಯಂಬತ್ತೂರು ಹಾಗೂ ಹೈದರಾಬಾದ್ ವಿಮಾನ ನಿಲ್ದಾಣಗಳತ್ತ ಡೈವರ್ಟ್ ಮಾಡಲಾಗಿದೆ.

 ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Kempegowda International Airport) ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆಯಾದ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಬಂದಿಳಿಯಬೇಕಿದ್ದ ವಿಮಾನಗಳನ್ನು ಬೇರೆಡೆಗೆ ಕಳುಹಿಸಲಾಗಿದೆ. ಕೆಲವನ್ನು ಚೆನ್ನೈಗೆ, ಇನ್ನು ಕೆಲವನ್ನು ಹೈದರಾಬಾದ್, ಕೊಯಮತ್ತೂರಿಗೆ ಕಳಿಸಲಾಯಿತು. ಇಂಡಿಗೋದ 7 ವಿಸ್ತಾರದ 3, ಗೋ ಏರ್, ಏರ್ ಇಂಡಿಯಾ, ಆಕಾಶ ಏರ್ ಲೈನ್ಸ್ ತಲಾ ಒಂದೊಂದು ವಿಮಾನಗಳನ್ನು ಬೇರೆಡೆ ಕಳಿಸಲಾಯಿತು.

Home add -Advt

ಬೇರೆಡೆಗೆ ಕಳುಹಿಸಲಾಗಿರುವ ವಿಮಾನಗಳಲ್ಲಿ ದೆಹಲಿ, ಮುಂಬೈ ಸೇರಿದಂತೆ ಇತರ ಭಾಗಗಳಿಂದ ಆಗಮಿಸುತ್ತಿದ್ದ ವಿಮಾನಗಳು ಸೇರಿವೆ.

ವಿಮಾನ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶಗಳಲ್ಲಿ 4-6 ಸೆಂ.ಮೀ ತೀವ್ರ ಮಳೆಯಾಗಿದೆ. ಜೊತೆಗೆ ಗಂಟೆಗೆ 20 ಕಿ.ಮೀ ವೇಗದಲ್ಲಿ ಗಾಳಿ ಬೀಸಿದ್ದು, ಇದು ವಿಮಾನ ಲ್ಯಾಂಡಿಂಗ್ ಮಾಡಲು ಅಡ್ಡಿಯಾಗಿದೆ. ಹಾಗಾಗಿ ಮುಂಜಾಗೃತಾ ಕ್ರಮವಾಗಿ ವಿಮಾನಗಳನ್ನು ಬೇರೆಡೆಗೆ ಕಳುಹಿಸಲಾಗಿದೆ.

ಸಂಜೆ 5 ಗಂಟೆ ವೇಳೆ ಸುರಿದ ಭಾರೀ ಮಳೆಯಿಂದಾಗಿ ಯಲಹಂಕ ಸುತ್ತಮುತ್ತ ರಸ್ತೆಗಳೆಲ್ಲ ನದಿಯಂತಾಗಿ ಸಂಚಾರ ಅಸ್ತವ್ಯಸ್ತವಾಗಿತ್ತು.

https://pragati.taskdun.com/donald-trumps-arrest/

Related Articles

Back to top button