ಪ್ರಗತಿವಾಹಿನಿ ಸುದ್ದಿ, ಸಂಕೇಶ್ವರ: ಸಮೀಪದ ಹಿರಾಶುಗರ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸಿ.ಇ.ಟಿ. ದಾಖಲೆ ಸಲ್ಲಿಕೆ ಸಹಾಯ ಕೇಂದ್ರ ಆರಂಭಿಸಲಾಗಿದೆ ಎಂದು ಪ್ರಾಚಾರ್ಯ ಡಾ. ಎಸ್.ಸಿ.ಕಮತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಿ.ಇ.ಟಿ. ಮೂಲಕ ಇಂಜಿನೀಯರಿಂಗ/ಬಿ.ಎಸ್ಸಿ ಅಗ್ರಿ ಹಾಗೂ ಇತರ ವೃತ್ತಿಪರ ಶಿಕ್ಷಣಕ್ಕೆ ಸೇರಬಯಸುವ ವಿದ್ಯಾರ್ಥಿಗಳು ಈ ಸಹಾಯ ಕೇಂದ್ರದಲ್ಲಿ ವೃತ್ತಿಪರ ಕೋರ್ಸುಗಳಿಗೆ ನಡೆಯುವ ಕೌನ್ಸೆಲಿಂಗ್ ನಲ್ಲಿ ದಾಖಲೆ ಭರ್ತಿ ಮಾಡಬಹುದು.
ಸೆಪ್ಟೆಂಬರ್ ೭ ಹಾಗೂ ೮ ರಂದು ೦೧-೨,೦೦೦ ರ‍್ಯಾಂಕ್, ೯ ಹಾಗೂ ೧೦ ರಂದು ೨೦೦೧-೭,೦೦೦, ೧೧ ರಿಂದ ೧೪ ರ ವರೆಗೆ ೭೦೦೧- ೧೫,೦೦೦, ೧೫ ರಿಂದ ೧೭ರ ವರೆಗೆ ೧೫,೦೦೧ – ೨೫,೦೦೦, ೧೮ ರಿಂದ ೨೦ ರವರೆಗೆ ೨೫,೦೦೧-೪೦,೦೦೦, ೨೧ ರಿಂದ ೨೩ ರವರೆಗೆ ೪೦,೦೦೧-೭೦,೦೦೦, ೨೪ ರಿಂದ ೨೭ ರವರೆಗೆ ೭೦,೦೦೧-೧,೦೦,೦೦೦, ೨೮ ರಿಂದ ಅಕ್ಟೋಬರ್ ೧ ರವರೆಗೆ ೧,೦೦,೦೦೧ ರಿಂದ ಕೊನೆಯ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳು ದಾಖಲೆ ಅಪ್ಲೋಡ್ ಮಾಡಬಹುದು.
ಮಾಹಿತಿಗೆ ದೂ. ೦೮೩೩೩-೨೭೮೮೮೭/೯೭೩೯೬೧೯೬೬೧/೮೬೬೦೫೩೫೫೨೫ ಗೆ ಸಂಪರ್ಕಿಸಬಹುದು ಎಂದು ಡಾ. ಎಸ್.ಸಿ.ಕಮತೆಯವರು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ