
ಗುರುದೇವ ಆತ್ಮಾನಂದ ಆಶ್ರಮದ ವತಿಯಿಂದ ಸಂತ್ರಸ್ತರಿಗೆ ನೆರವು
ಪ್ರಗತಿವಾಹಿನಿ ಸುದ್ದಿ – ಬೈಲಹೊಂಗಲ: ಸ್ಥಳೀಯ ಗೋವನಕೊಪ್ಪ ಗ್ರಾಮದ ಸಣ್ಣವೀರಪ್ಪ ಚನ್ನಬಸಪ್ಪ ಹೊಂಗಲ ಪ್ರತಿಷ್ಠಾನ ರಾಮದುರ್ಗ ತಾಲೂಕಿನ ಸುರೇಬಾನದ ಗುರುದೇವ ಆತ್ಮಾನಂದ ಆಶ್ರಮದಲ್ಲಿ ನೆಲೆಸಿದ ಸುತ್ತಮುತ್ತಲಿನ ಗ್ರಾಮಗಳ ನೆರೆ ಸಂತ್ರಸ್ತರಿಗೆ ಹಾಸಿಗೆ, ವಸ್ತ್ರ, ಉಡುವ ಬಟ್ಟೆಗಳು, ಪೇಸ್ಟ್, ಹಾಲಿನ ಪುಡಿ, ಬಿಸ್ಕೆಟ್ಸ್, ಸಾಬೂನು, ರೇಷನ್ ಮತ್ತು ಔಷದಗಳನ್ನು ಗುರುದೇವ ಸಮರ್ಥ ಶಿವಾನಂದರ ಅಮೃತ ಹಸ್ತದಿಂದ ವಿತರಿಸಲಾಯಿತು. ಗೋವನಕೊಪ್ಪ ಗ್ರಾಮಸ್ಥರು ಮತ್ತು ಪ್ರತಿಷ್ಠಾನದ ಸ್ವಯಂಸೇವಕರು ನೆರೆ ಸಂತ್ರಸ್ತರಿಗೆ ಸ್ಥಳದಲ್ಲಿಯೇ ಅಡುಗೆ ಮಾಡಿ ಊಟ ಬಡಿಸಿದರು.////
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ